ಬೇಲೂರು: ನಿನ್ನೆ ನಡೆದ ರಾಜ್ಯ ಕಾಂಗ್ರೇಸ್ ಪಕ್ಷದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮೂಲ ಕಾಂಗ್ರೆಸ್ ಹಾಗೂ ಕುರುಬ ಸಮಾಜದ ಹಿರಿಯರನ್ನು ತಾಲೂಕು ಬ್ಲಾಕ್ ಅಧ್ಯಕ್ಷ ಎಂ.ಜೆ ನಿಶಾಂತ ಕಡೆಗಣಿಸಿ ಅವಮಾನ ಮಾಡಿದ್ದಾರೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಬಿ.ಎಲ್.ಧರ್ಮೇಗೌಡ ಹಾಗೂ ಹಿರಿಯ ಮುಖಂಡ ರಾಯಪುರ ಶಿವಣ್ಣ ನೇರವಾಗಿ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು ೭೦ ಲಕ್ಷ ಅಧಿಕ ಕುರುಬ ಸಮಾಜದ ಜನರಿದ್ದು, ಜಿಲ್ಲೆಯಲ್ಲಿ ೩.೫೦ ಲಕ್ಷ ಇದ್ದು, ತಾಲೂಕಿನಲ್ಲಿ ೧೮,೦೦೦ ಜನರಿದ್ದು ನಮ್ಮ ಸಮಾಜವೇ ನಿರ್ಣನಾಯಕ, ಆದರೆ ನಮ್ಮ ಸಮಾಜವನ್ನೇ ತುಳಿಯಲು ಹೊರಟಿದ್ದಾರೆ, ಹಿಂದುಳಿದ ಸಮಾಜವನ್ನೇ ಕಾಂಗ್ರೇಸ್ ನಂಬಿ ಚುನಾವಣೆಯಲ್ಲಿ ಎಲ್ಲಾ ಕಡೆ ಮತ ಕೇಳುತ್ತಿದೆ, ಆದರೆ ಬೇಲೂರಿನಲ್ಲಿ ನೆನ್ನೆ ನಡೆದ ಪ್ರಜಾಧ್ವನಿ ಯಾತ್ರೆಯಲ್ಲಿ ಪಟೇಲ ಶಿವಪ್ಪ, ಜಾವಗಲ್ ಮಂಜುನಾಥ ಇನ್ನು ಮುಂತಾದ ಹಿರಿಯ ಮೂಲ ಕಾಂಗ್ರೆಸ್ಸಿಗರ ಹೆಸರನ್ನು ಹೇಳದೆ, ಅಲ್ಲದೆ ವೇದಿಕೆಯಲ್ಲಿ ಗೌರವಿಸದೆ ಅಗೌರವಿಸಿ ಅವಮಾನ ಮಾಡಿದ್ದಾರೆ.
ನಮ್ಮ ಸಮಾಜಕ್ಕೆ ಅವಮಾನ ಮಾಡುವುದೇ ಒಂದೇ ನಮ್ಮ ನಾಯಕರಾದ ಸಿದ್ದರಾಮಯ್ಯ ಅವರನ್ನು ಅವಮಾನಿಸುವುದು ಒಂದೇ. ರಾಜ್ಯದಲ್ಲಿ ಸಿದ್ದರಾಮಯ್ಯ ಇಲ್ಲದೆ ಕಾಂಗ್ರೆಸ್ಸಿಗೆ ಅಸ್ತಿತ್ವನೇ ಇಲ್ಲ. ಸಿದ್ದರಾಮಯ್ಯ ಅವರ ಆಡಳಿತ ನೋಡಿ ಇತರೆ ಪಕ್ಷದವರು ಕಾಂಗ್ರೆಸ್ಸಿಗೆ ಬರುತ್ತಿದ್ದಾರೆ, ಆದರೆ ಇತರೆ ಪಕ್ಷದಿಂದ ವಲಸೆ ಬಂದವರು ಮೂಲ ಕಾಂಗ್ರೆಸ್ಸಿಗರನ್ನು ಕಡೆಗಣಿಸುತ್ತಿರುವುದಲ್ಲದೆ, ಅವಮಾನಿಸಿ ನಿರ್ಲಕ್ಷ್ಯಸಿಸುತ್ತಿದ್ದಾರೆ ಈ ರೀತಿ ನಡೆಗೆ ತಾಲೂಕಿನಲ್ಲಿ ಕಾಂಗ್ರೇಸ್ ಬರಲು ಸಾಧ್ಯವೇ, ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ನಾವೆಲ್ಲ ಹೋರಾಡುತ್ತೇವೆ ಆದರೆ ಕುರುಬ ಸಮಾಜದವರು ಯಾವ ಕಡೆ ಹೋಗುತ್ತಾರೋ ತಿಳಿಯದು, ಯಾಕಂದರೆ ಈ ರೀತಿಯ ಅವಮಾನ ನಡೆಯುತ್ತಿದ್ದರೆ ಅವರ ನಡೆ ಅನ್ಯ ಪಕ್ಷದ ಕಡೆ ಹೋಗಬಹುದು, ಇದನ್ನು ತಡೆಯಲು ಸಾಧ್ಯವಿಲ್ಲ. ಆದಷ್ಟು ಬೇಗ ಜಿಲ್ಲಾ ಮುಖಂಡರು, ರಾಜ್ಯ ನಾಯಕರು ಎಚ್ಚೆತ್ತುಕೊಂಡು ಅವರ ನೆಡೆಗೆ ತಡೆ ಒಡ್ಡದಿದ್ದರೆ ಪಕ್ಷಕ್ಕೆ ತುಂಬಲಾರದ ನಷ್ಟವಾಗಬಹುದು ಎಂದು ಹೇಳಿದರು. ಕಾಂಗ್ರೇಸ್ ಮುಖಂಡರಾದ ದೇವರಾಜ, ಮಂಜುನಾಥ, ಜಯರಾಮ, ಶ್ರೀರಾಮ ಇದ್ದರು.