ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಪ್ರಹಸನ ಮುಂದುವರಿದಿದ್ದು ಇಂದು ಸಹ ಸಂಸದರ ನಿವಾಸದ ಎದುರು ಭವಾನಿ ರೇವಣ್ಣ ಅಥವಾ ರೇವಣ್ಣ ಅವರಿಗೆ ಟಿಕೆಟ್ ನೀಡುವಂತೆ ಒತ್ತಾಯಿಸಿ ನೂರಾರು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿದ್ದರು.
ಈ ಸಂದರ್ಭದಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ನೂರಾರು ಮಂದಿ ತಂದ ಕಾರ್ಯಕರ್ತರು ಆರ್‌ಸಿ ರಸ್ತೆಯಿಂದ ಸಾಗಿ ಜಿಲ್ಲಾ ಪಂಚಾಯಿತಿ ಎದುರು ಕೆಲಕಾಲ ಪ್ರತಿಭಟನೆ ನಡೆಸಿ ಪಟಾಕಿ ಸಿಡಿಸಿ ಒತ್ತಾಯಿಸಿದರು.
ಭವಾನಿ ರೇವಣ್ಣ ಅವರ ಫೋಟೋ ಹಿಡಿದು ಪ್ರತಿಭಟನೆ ನಡೆಸಿದ ಮಹಿಳಾ ಕಾರ್ಯಕರ್ತೆಯರು ದೇವೇಗೌಡರು, ರೇವಣ್ಣ, ಭವಾನಿ ರೇವಣ್ಣ ಪರ ಘೋಷಣೆಗಳನ್ನು ಕೂಗಿದರು.