ಹಾಸನ: ಭ್ರಷ್ಟಮುಕ್ತ ಆಡಳಿತಕ್ಕೆ ಪೊರಕೆ ಪರಿಹಾರ ಎಂಬ ಧ್ಯೇಯದ ಅಡಿಯಲ್ಲಿ ಇಂದು ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಆಗಿಲೇ ಯೋಗೀಶ ನೇತೃತ್ವದಲ್ಲಿ ಆಮ್ ಆದ್ಮಿ ಪಕ್ಷದ ವತಿಯಿಂದ ಅಬ್ಬರದ ಪ್ರಚಾರ ಆರಂಭಿಸಿದ್ದಾರೆ.
ಹೇಮಾವತಿ ಪ್ರತಿಮೆ ಬಳಿಯಿಂದ ಆರಂಭವಾದ ಪ್ರಚಾರ ಕಾರ್ಯಕ್ರಮ ನಗರದ ಪ್ರಮುಖ ರಸ್ತೆಗಳಲ್ಲಿನ ಅಂಗಡಿ ಮಳಿಗೆಗಳು ಹಾಗೂ ಬಡಾವಣೆಯ ಜನರಿಗೆ ಆಡಳಿತ ಪಕ್ಷಗಳ ವೈಫಲ್ಯ ಹಾಗೂ ಲೋಪಗಳ ಬಗ್ಗೆ ಅರಿವು ಮೂಡಿಸುವ ಜೊತೆಗೆ ಮುಂಬರುವ ಚುನಾವಣೆಯಲ್ಲಿ ಭ್ರಷ್ಟಾಚಾರದ ಮುಕ್ತ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಈ ವೇಳೆ ಅಗಿಲೆ ಯೋಗೀಶ ಮಾತನಾಡಿ, ಭ್ರಷ್ಟ ಮುಕ್ತ ಸಮಾಜಕ್ಕೆ ಪೋರಕೆಯೆ ಪರಿಹಾರ ಎಂಬ ಘೋಷವಾಕ್ಯದ ಅಡಿಯಲ್ಲಿ ಇಂದು ಆಮ್ ಆದ್ಮಿ ಪಕ್ಷದ ವತಿಯಿಂದ ಪ್ರಚಾರ ಆರಂಭಿಸಿದ್ದು, ಜನರ ತೆರಿಗೆ ಹಣ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಜೆಸಿಬಿ ಪಕ್ಷಗಳನ್ನು ದೂರ ಇಡಬೇಕು ಎಂದರು.
ಹಾಸನ ವಿಧಾನಸಭಾ ಕ್ಷೇತ್ರದ ಜನತೆಗೆ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸಲು ಆಮ್ ಆದ್ಮಿ ಪಕ್ಷವೇ ಸೂಕ್ತ ಈ ನಿಟ್ಟಿನಲ್ಲಿ ನಗರದ ಎಲ್ಲಾ ಜನರಲ್ಲಿ, ಮುಂಬರುವ ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತಗಳನ್ನು ಆಮ್ ಆದ್ಮಿ ಪಕ್ಷಕ್ಕೆ ನೀಡುವ ಮೂಲಕ ಬೆಂಬಲಿಸುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಮುಖಂಡರಾದ ಶಂಕರ ಮಂಜು, ಅಬೀಬ್, ಸುಂದರೇಶ, ರೆಹಮತ್, ರಂಗಸ್ವಾಮಿ, ನಜೀರ್ ಇತರರು ಇದ್ದರು.