ಸಕಲೇಶಪುರ: ಕಾಂಗ್ರೆಸ್ ಪಕ್ಷದಲ್ಲಿ ಗುಂಪುಗಾರಿಕೆ ಮಾಡುವುದನ್ನು ಸಹಿಸುವುದಿಲ್ಲ ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿದ್ಯಾಶಂಕರ್ ಹೇಳಿದರು.
ನಿಕಟ ಪೂರ್ವ ಕಾಂಗ್ರೆಸ್ ಅಧ್ಯಕ್ಷ ಹಾನುಬಾಳ್ ಭಾಸ್ಕರ್ ಬೆಂಬಲಿಗರ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸುತ್ತಿದ್ದು, ನಾವು ಪಕ್ಷಕ್ಕಾಗಿ ದುಡಿಯುತ್ತೇವೆಯೇ ವಿನಃ ವ್ಯಕ್ತಿಯ ಪ್ರತಿಷ್ಠೆಗಾಗಿ ಕೆಲಸ ಮಾಡುವುದಿಲ್ಲ ಹಾಲಿ ಕಾಂಗ್ರೆಸ್ ಅಧ್ಯಕ್ಷ ಹಾನುಬಾಳ ಭಾಸ್ಕರ ಇದ್ದರೂ ಮತ್ತೊಬ್ಬ ಅಧ್ಯಕ್ಷರ ನೇಮಕ ಅವಶ್ಯಕತೆ ಏನಿತ್ತು ಎಂದು ಪ್ರಶ್ನೆಸಿದರು.
ಹಾನುಬಾಳ್ ಭಾಸ್ಕರ್ ಮಾತನಾಡಿ ಚುನಾವಣೆಗೆ ಇನ್ನು 2 ತಿಂಗಳು ಬಾಕಿ ಇರುವಾಗ ಅಧ್ಯಕ್ಷರ ಬದಲಾವಣೆ ಅಗತ್ಯವಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮೊನ್ನೆ ನಡೆದ ಅಧ್ಯಕ್ಷರ ಅಭಿನಂದನಾ ಸಮಾರಂಭಕ್ಕೆ ಸೌಜನ್ಯಕ್ಕಾದರೂ ನಮ್ಮನು ಆಹ್ವಾನಿಸಿಲಿಲ್ಲ ಎಂದು ಹೇಳಿದರು. 6 ವರ್ಷಗಳಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಎಲ್ಲರನ್ನೂ ಒಗ್ಗೂಡಿಸಿ ಕೆಲಸ ಮಾಡಿರುವ ತೃಪ್ತಿ ನನಗೆ ಇದೆ. ಆದರೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಆಂತರಿಕ ಬದಲಾವಣೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆಲೂರು – ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಇಲ್ಲದಿದ್ದರೆ ಮತ್ತೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದು ಕನಸು ಎಂದರು.
ನಮ್ಮ ಕ್ಷೇತ್ರದ ಸಂಯೋಜಕ ಅನಿಲರವರನ್ನು ಬದಲಾವಣೆ ಮಾಡಬೇಕು. ಇದರಿಂದ ಕ್ಷೇತ್ರದಲ್ಲಿ ಗುಂಪುಗಾರಿಕೆ ನಡೆಯುತ್ತಿದ್ದು ಪಕ್ಷಕ್ಕೆ ಹಾನಿ ಯಾಗಲಿದೆ ಎಂದು ಕಾರ್ಯಕರ್ತರು ಅಭಿಪ್ರಾಯ ವ್ಯಕ್ತಪಡಿಸಿದರು. ಈ ಸಭೆಯಲ್ಲಿ ಮಾಜಿ ಅಧ್ಯಕ್ಷ ವಿದ್ಯಾಶಂಕರ, ಹಾನುಬಾಳ ಭಾಸ್ಕರ, ವೈ.ಪಿ.ರಾಜೇಗೌಡ, ಎಸ್‌ಸಿ ಘಟಕದ ಅಧ್ಯಕ್ಷ ದೊಡ್ಡೀರಯ್ಯ ಭಾಗವಹಿಸಿದ್ದರು.