News Karnataka
Saturday, June 10 2023
ರಾಜಕೀಯ

ಬಿಜೆಪಿ ಮಂಡಲದ ಕಾರ್ಯಕಾರಿಣಿ-ಕಾರ್ಯಕರ್ತರ ಸಭೆ

A meeting of Bharatiya Janata Party SC Morcha Sakleshpur mandal functionaries and workers was held at BJP office in the town.
Photo Credit : Bharath

ಸಕಲೇಶಪುರ: ಭಾರತೀಯ ಜನತಾ ಪಾರ್ಟಿ ಎಸ್.ಸಿ ಮೋರ್ಚಾದ ಸಕಲೇಶಪುರ ಮಂಡಲದ ಕಾರ್ಯಕಾರಿಣಿ ಹಾಗೂ ಕಾರ್ಯಕರ್ತರ ಸಭೆ ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆಯಿತು.

ನಂತರ ಎಸ್ಸಿ ಮೋರ್ಚಾದ ಜಿಲ್ಲಾ ಅಧ್ಯಕ್ಷ ಬಿ. ಎಸ್. ಚಂದ್ರು ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು ರಾಜ್ಯದಲ್ಲಿ ಪರಿಶಿಷ್ಟ ಜಾತಿ ಪಂಗಡದವರಿಗೆ ಮೀಸಲಾತಿ ಮತ್ತು ಅಂಬೇಡ್ಕರ್ ನಿಗಮ ಮಂಡಳಿಯಲ್ಲಿ ಅನುದಾನ ಹೆಚ್ಚಿಸಿದೆ ಇವುಗಳನ್ನು ಮನೆ ಮನೆಗೆ ತಲುಪಿಸುವ ಮೂಲಕ ನಮ್ಮ ಪಕ್ಷದ ಅಭ್ಯರ್ಥಿಯನ್ನು ಶಾಸಕರನ್ನಾಗಿ ಮಾಡಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸಿ ಮೋರ್ಚಾದ ತಾಲೂಕು ಅಧ್ಯಕ್ಷ ಜಾನಕಿ ಲೋಕೇಶ್ ವಹಿಸಿದ್ದರು. ಬಿಜೆಪಿ ಮುಖಂಡ ಎಚ್.ಎಂ ವಿಶ್ವನಾಥ್ ಮಾತಾನಾಡಿ ಆಲೂರು, ಸಕಲೇಶಪುರ ಕಟ್ಟಾಯ ಭಾಗದಲ್ಲಿ ಕಳೆದ ಬಾರಿ ಚುನಾವಣೆಯಲ್ಲಿ ಅಲ್ಪ ಸ್ವಲ್ಪ ಮತಗಳ ಅಂತರದಿಂದ ಬಿಜೆಪಿ ಪರಾಜೀತ ಗೊಂಡಿತ್ತು. ಕಾರಣ ಕಟ್ಟಾಯ ಕ್ಷೇತ್ರದಲ್ಲಿ ಹೆಚ್ಚಿನ ಮತ ನಮ್ಮ ಪಕ್ಷಕ್ಕೆ ಬಾರದಿರುವುದು ಒಂದು ಕಡೆ ಆದರೆ, ಈ ಕ್ಷೇತ್ರದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ದಲಿತ ಮತಗಳಿದ್ದು ದಲಿತ ಮತಗಳನ್ನು ಓಲೈಕೆ ಮಾಡುವುದರಲ್ಲಿ ವಿಫಲವಾಗಿರುವುದು ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದರು.

ನಂತರ ಬಿಜೆಪಿ ಮುಖಂಡ ಸಿಮೆಂಟ್ ಮಂಜು ಮಾತನಾಡಿ, ಮೂರು ಬಾರಿ ಶಾಸಕರಾಗಿ ನಮ್ಮ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವಲ್ಲಿ ಶಾಸಕ ಹೆಚ್. ಕೆ. ಕುಮಾರಸ್ವಾಮಿ ಹಾಗೂ ಜೆಡಿಎಸ್ ವಿಫಲರಾಗಿದ್ದು, ಜನರಿಗೆ ಸುಳ್ಳು ಆಶ್ವಾಸನೆ ನೀಡಿ ಈ ಕ್ಷೇತ್ರಕ್ಕೆ ಮಲತಾಯಿ ಧೋರಣೆಯನ್ನು ಮಾಡಿದ್ದಾರೆ, ಈಗಲೂ ಅನೇಕ ಕಡೆಗಳಲ್ಲಿ ಮೂಲಭೂತ ಸೌಕರ್ಯಗಳಿಲ್ಲದೆ ಜನರು ವಂಚಿತರಾಗಿದ್ದಾರೆ ಹಾಗೂ ಕೆಲವು ಸಮುದಾಯಗಳಿಗೆ ಯಾವುದೇ ಸೌಕರ್ಯಗಳನ್ನು ನೀಡದೆ ಭರವಸೆಯಲ್ಲೇ ಜನರ ಹೊಟ್ಟೆಯನ್ನು ತುಂಬಿಸುತ್ತಿದ್ದಾರೆ. ಇದು ಎಲ್ಲಾ ಕ್ಷೇತ್ರದ ಜನರಿಗೂ ತಿಳಿದ ವಿಷಯ. ಆದರೆ ಈ ಬಾರಿ ಚುನಾವಣೆಯಲ್ಲಿ ಅವರಿಗೆ ತಕ್ಕ ಉತ್ತರ ನೀಡುತ್ತೇವೆ. ನಿಷ್ಠಾವಂತ ಹಾಗೂ ಪ್ರಜ್ಞಾವಂತ ಮತದಾರರು ಬುದ್ಧಿಜೀವಿಗಳಾಗಿದ್ದು, ಹೊಸ ಬದಲಾವಣೆಯೊಂದಿಗೆ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಬಿಜೆಪಿ ಸರ್ಕಾರಕ್ಕೆ ಸಹಕಾರ ನೀಡುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ.

ಈಗಾಗಲೆ ಸಕಲೇಶಪುರ ತಾಲೂಕಿನ ಹಲವಾರು ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು ನಾವು ನಮ್ಮ ಪಕ್ಷದಿಂದ ಒಬ್ಬ ಶಾಸಕರನ್ನು ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಸಕಲೇಶಪುರ ಆಲೂರು ಕಟ್ಟಾಯ ಕ್ಷೇತ್ರದಲ್ಲಿ ಬಿಜೆಪಿಗೆ ಪೂರಕವಾದ ವಾತಾವರಣವಿದ್ದು ಸಂಘಟನೆಯಿಂದ ಬಂದಂತಹ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಈ ಬಾರಿ ಪಕ್ಷ ಬಲಪಡಿಸುವಲ್ಲಿ ಹಗಲಿರುಳು ಶ್ರಮಿಸುವುದಾಗಿ ತಿಳಿಸಿ, ಮತ್ತು ಮೇಲ್ವರ್ಗದ ಹಲವಾರು ಜಾತಿಯ ಕಾರ್ಯಕರ್ತರುಗಳು ಪಕ್ಷವನ್ನು ಬಲಪಡಿಸಲು ಮುಂಚೂಣಿಯಲ್ಲಿದ್ದಾರೆ. ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ಉನ್ನತ ಸ್ಥಾನ ಮಾನವನ್ನು ನೀಡಿ ದೇಶದಲ್ಲಿ ಮಾದರಿ ವ್ಯಕ್ತಿಯನ್ನಾಗಿ ಪೂಜಿಸುವ ಅಂಬೇಡ್ಕರ್ ಅವರಿಗೆ ಮತ್ತು ಅವರ ಸಮುದಾಯಕ್ಕೆ ಯಾವುದೇ ಜಾತಿ ಭೇದ ಇಲ್ಲಾವೆಂಬುದನ್ನು ನಮ್ಮ ಬಿಜೆಪಿ ಸರ್ಕಾರ ತೋರಿಸಿಕೊಟ್ಟಿದ್ದಾರೆ. ಅಂಬೇಡ್ಕರ್ ವಾಸವಿದ್ದ ಸ್ಥಳ, ಓದುತ್ತಿದ್ದ ಸ್ಥಳ, ವಿದ್ಯಾಭ್ಯಾಸ ಮಾಡಿದ ಸ್ಥಳಗಳ ಅವರ ಜೀವನ ಚರಿತ್ರೆಯೊಂದಿಗೆ ಪಂಚ ತೀರ್ಥಗಳು ಎಂಬ ಯೋಜನೆ ಅಡಿಯಲ್ಲಿ ಅಭಿವೃದ್ಧಿಪಡಿಸಿ ಅಂಬೇಡ್ಕರ್ ಅವರಿಗೆ ಹೆಚ್ಚಿನ ಗೌರವ ತಂದುಕೊಟ್ಟಿದ್ದಾರೆ. ಇದು ನಮ್ಮ ಬಿಜೆಪಿ ಪಕ್ಷದ ನರೇಂದ್ರ ಮೋದಿಯವರು ಅಂಬೇಡ್ಕರ್ ಗೆ ನೀಡಿದ ಅತೀದೊಡ್ಡ ಗೌರವ ಹಾಗೂ ಕೊಡುಗೆಯಾಗಿದೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾಸಳ್ಳಿ ಚಂದ್ರು ಮಾತನಾಡಿ, ಬಸವರಾಜು ಬೊಮ್ಮಾಯಿ ಅವರು ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದವರ ಮೀಸಲಾತಿ ಹೆಚ್ಚಿಸುವುದರ ಜೊತೆಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅನುದಾನವನ್ನು ಹೆಚ್ಚಿಸುವ ಮೂಲಕ ಎಸ್‌.ಸಿ ಸಮುದಾಯಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇನ್ನು ಹತ್ತು ಹಲವು ಯೋಜನೆಗಳನ್ನು ಸಮುದಾಯಕ್ಕೆ ಕೊಡುಗೆಯಾಗಿ ನೀಡಿದ್ದು, ಇದರ ಸದುಪಯೋಗವನ್ನು ಸಮುದಾಯದವರು ಪಡೆದುಕೊಂಡು ಬಿಜೆಪಿ ಸರ್ಕಾರವನ್ನು ಮತ್ತೊಮ್ಮೆ ಅಧಿಕಾರಕ್ಕೆ ತಂದು ದೇಶದ ಅಭಿವೃದ್ಧಿಯತ್ತಾ ಸಾಗಲು ಕೈ ಜೋಡಿಸೋಣಾ ಎಂದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎಚ್. ಎಂ. ವಿಶ್ವಾನಾಥ, ಆಲೂರು ಸಕಲೇಶಪುರ ಬಿಜೆಪಿ ಮುಖಂಡರು ಸಿಮೆಂಟ್ ಮಂಜು, ತಾಲೂಕು ಮಂಡಲದ ಅಧ್ಯಕ್ಷ ಲೋಕೇಶ ಜಾನೇಕೆರೆ, ಪರ್ವತಯ್ಯ, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಎಸ್. ಟಿ. ಚಂದ್ರ, ಪ್ರಧಾನ ಕಾರ್ಯದರ್ಶಿ ಮಾಸವಳ್ಳಿ ಚಂದ್ರು, ಎಸ್ಸಿ ಮೋರ್ಚಾದ ಜಿಲ್ಲಾ ಉಪಾಧ್ಯಕ್ಷ ಸ್ಟಿವನ್ ಪ್ರಕಾಶ, ಪ್ರಧಾನ ಕಾರ್ಯದರ್ಶಿ ಕೊಲ್ಲಳ್ಳಿ ಬಾಲರಾಜ, ಉಪಾಧ್ಯಕ್ಷ ಮಲ್ಲಗದ್ದೆ ಸಂಪತ್ತು, ಕೆಡಿಪಿ ಸದಸ್ಯ ರಾಜಶೇಖರ, ನಾಗರಾಜ ಹಳ್ಳಿಬೈಲು, ಐಗುರ್ ದಿನೇಶ, ಮಧುಕೇಶ್ವರ ಬೆಳಗೋಡು, ವಸಂತ ಕ್ಯಾನಳ್ಳಿ, ಸುರೇಶ ಹಾನ್ಬಾಳು, ಕಾರ್ಯಕರ್ತರು ಉಪಸ್ಥಿತರಿದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *