ಅರಕಲಗೂಡು: ರಾಮನಾಥಪುರದ ಜೆಡಿಎಸ್ ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿ, ಮುಂಬರುವ ವಿಧಾನ ಸಭಾ ಕ್ಷೇತ್ರದಿಂದ ಅತಿ ಹೆಚ್ಚು ಅಂತರದಿಂದ ಜಯಗಳಿಸಲು ಪ್ರತಿಯೊಬ್ಬ ಕಾರ್ಯಕರ್ತರು ಸಹಾಯ ಮಾಡುವಂತೆ ಮಾಜಿ ಸಚಿವ ಎ. ಮಂಜು ಮನವಿಯನ್ನು ಮಾಡಿದರು.
ರಾಮನಾಥಪುರ ಹೋಬಳಿ ಗಂಗೂರು ಗ್ರಾಮದಲ್ಲಿ ಮತ ಯಾಚನೆ ಮಾಡಿದ ನಂತರ ವರದಿಗಾರೊಂದಿಗೆ ಮಾತನಾಡಿದ ಅವರು, ನಾವು ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡುತ್ತೇವೆ. ಚುನಾವಣೆ ನಂತರ ಈ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಮುಂದೆಯೂ ಸಹ ಅರಕಲಗೂಡು ಕ್ಷೇತ್ರ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲು ತಾವು ಹೆಚ್ಚಿನ ಸಹಕಾರ ನೀಡಿ ಎಂದ ಅವರು, ಕ್ಷೇತ್ರದ ಹಲವು ಕಡೆ ಆಪಾರ ಬೆಂಬಲಿಗರು, ಕಾರ್ಯಕರ್ತರ ಜೊತೆಯಲ್ಲಿ ಮನೆ-ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇವೆ. ಎಲ್ಲರ ಸಹಕಾರ ಇದೆ. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ, ನೋಡಿದಾಗ ಈ ಭಾರಿಯೂ ಜೆಡಿಎಸ್ ಭದ್ರಕೋಟೆಯಾದ ವಿಧಾನ ಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಮಾಜಿ ಸದಸ್ಯರಾದ ಜಿ.ಸಿ. ಮಂಜೇಗೌಡ, ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ, ಎಂ.ಎಚ್ ಕೃಷ್ಣಮೂರ್ತಿ, ಕೊಣನೂರು ವೈಯ್ಸಳ ಕೋಟವಾಳು ಮಹದೇವ, ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸೇವಾ ಸಹಕಾರ ಸಂಘದ ಅಧ್ಯಕ್ಷರು ಗಂಗೂರು ಬಿ.ಎಸ್ ಭರತ್, ಮಾಜಿ ಅಧ್ಯಕ್ಷರು ಕುಮಾರಸ್ವಾಮಿ, ಸದಸ್ಯರಾದ ಜಿ.ಸಿ. ಶಿವಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಮೋಹನ, ಮಾದೇಶ್, ಸಿದ್ದಯ್ಯ, ಮಂಜು, ಜೆಡಿಎಸ್ ಯುವ ಮುಖಂಡರು ಎಸ್.ಬಿ. ಸುಬಾಸ್, ಕೂಡಲೂರು ಪ್ರಕಾಶ್ ಹಾಗೂ ಕೆ.ಕೆ. ರಮೇಶ ನಾಗೇಶ್, ಅರ್.ಎನ್ ಪ್ರವೀಣ ಮುಂತಾದವರು ಇದ್ದರು.