ಹಾಸನ: ಹಾಸನ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಕೆಲವೇ ದಿನ ಬಾಕಿ ಇದ್ದು, ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್ ರಿಂದ ಹಾಸನದಲ್ಲಿ ಬೃಹತ್ ಬೈಕ್ ರ್‍ಯಾಲಿ ನಡೆಯಿತು.
ಸ್ವರೂಪ್ ಪ್ರಕಾಶ್‌ಗೆ ಸಂಸದ ಪ್ರಜ್ವಲ್ ರೇವಣ್ಣ ಸಾಥ್ ನೀಡಿದರು. ಬೈಕ್ ರ್‍ಯಾಲಿಯಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಭಾಗಿಯಾಗಿದ್ದರು. ನಗರದ ಇಂಡಸ್ಟ್ರಿಯಲ್ ಏರಿಯಾದಿಂದ ಆರಂಭವಾದ ಬೈಕ್ ರ್‍ಯಾಲಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು, ನಂತರ ಬೃಹತ್ ರೋಡ್ ಶೋ ನಡೆಸಿದರು. ಕಳೆದ ಎರಡು ದಿನಗಳ ಹಿಂದೆ ಬೈಕ್ ರ್‍ಯಾಲಿ ನಡೆಸಿದ್ದ ಶಾಸಕ ಪ್ರೀತಂಗೌಡ ಹಾಗೂ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ವಿಜಯೇಂದ್ರ ಅವರಿಗೆ ಟಕ್ಕರ್ ನೀಡಲು ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಪ್ರಕಾಶ್‌ರಿಂದ ಬೃಹತ್ ಬೈಕ್ ರ್‍ಯಾಲಿ ಆಯೋಜನೆ ಮಾಡಲಾಗಿತ್ತು. ಚುನಾವಣೆಗೆ ಮೂರು ದಿನ ಇರುವಂತೆ ಪ್ರಜ್ವಲ್ ರೇವಣ್ಣ ಅವರು ಸ್ವರೂಪ್ ಅವರಿಗೆ ಸಾಥ್ ನೀಡಿದ್ದು, ಬೈಕ್ ರ್‍ಯಾಲಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು.
ಬಿ.ಎಂ ರಸ್ತೆಯಿಂದ ಹೌಸಿಂಗ್ ಬೊರ್ಡ್, ವಿಜಯನಗರ, ಸಂಗಮೇಶ್ವರ ನಗರ, ಬಸವೇಶ್ವರ ಕಲ್ಯಾಣ ಮಂಟಪ ಎದುರು, ಹೊಸಲೈನ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಯಲ್ಲಿ ಜೆಡಿಎಸ್ ನಿಂದ ಬೃಹತ್ ರೋಡ್ ಶೋ ನಡೆಯಿತು.