ಬೇಲೂರು: ಪ್ರತಿದಿನ ದೊಡ್ಡ ಸಂಖ್ಯೆಯಲ್ಲಿ ಅನ್ಯ ಪಕ್ಷಗಳನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವವರ ಸಂಖ್ಯೆಯನ್ನು ನೋಡಿದರೆ ಸಂತೋಷವಾಗುತ್ತದೆ. ಇದು ಬಿಪಿಯ ಗೆಲುವಿನ ಸಂಕೇತವನ್ನು ತೋರುತ್ತಿದೆ. ಇದೇ ರೀತಿ ಇನ್ನು ಕೆಲವೇ ದಿನಗಳ ಕಾಲ ಸೇರ್ಪಡೆ ಮತ್ತು ಕಾರ್ಯಕರ್ತರ ಶಕ್ತಿ ಪ್ರದರ್ಶನವಾಗುತ್ತಿದ್ದರೆ ನಾವು ಗೆಲ್ಲುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಬೇಲೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹೆಚ್.ಕೆ ಸುರೇಶ್ ಹೇಳಿದರು.
ಭೂತನಗುಡಿ ಗ್ರಾಮಪಂಚಾಯತ್ ಸದಸ್ಯ ಮಲ್ಲೇಶ್ ಬಿಜೆಪಿಗೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವ ಜನರನ್ನು ನೋಡಿದರೆ, ಜನರಿಗೆ ಸತ್ಯದ ಅರಿವಾದಂತಿದೆ. ಎಲ್ಲರಿಗೂ ಈಗ ಬಿಜೆಪಿಯ ಮಹತ್ವ ಅರಿವಿಗೆ ಬಂದಿದೆ. ಇದೇ ರೀತಿಯಾಗಿ ಇನ್ನು ಕೆಲವೇ ಸಮಯದಲ್ಲಿ ಇಡೀ ಬೇಲೂರು ಬಿಜೆಪಿಯ ಭದ್ರಕೋಟೆಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸೇರ್ಪಡೆಗೊಂಡ ಮಲ್ಲೇಶ್, ಇಷ್ಟು ದಿನಗಳ ಕಾಲ ಬೇರೆ ಪಕ್ಷಗಳ ಆಡಳಿತವನ್ನು ನೋಡಿ ಬೇಸತ್ತು ಈಗ ಬಿಜೆಪಿ ಪಕ್ಷದ ಮೇಲೆ ಭರವಸೆಯಿಟ್ಟು ಬಂದಿದ್ದೇನೆ. ಇದು ಖಂಡಿತವಾಗಿಯೂ ಫಲವನ್ನು ನೀಡುತ್ತದೆಯೆನ್ನುವ ನಂಬಿಕೆಯಿದೆ ಮತ್ತು ಸುರೆಶಣ್ಣ ಗೆಲ್ಲುತ್ತಾರೆನ್ನುವ ಆತ್ಮವಿಶ್ವಾಸ ನನ್ನಂತಹ ಲಕ್ಷಾಂತರ ಜನರಲ್ಲಿದೆ ಎಂದು ಹೇಳಿದರು.