ಬೇಲೂರು: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬೇಲೂರು ಬಿಜೆಪಿ ಅಭ್ಯರ್ಥಿ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಹುಲ್ಲಹಳ್ಳಿ ಸುರೇಶ ಮತದಾರರಿಗೆ ನೀಡಿದ್ದ ಕುಕ್ಕರ್ ಸ್ಪೋಟಗೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಹಾಸನ ಜಿಲ್ಲೆ, ಬೇಲೂರು ತಾಲೂಕಿನ ಸನ್ಯಾಸಿಹಳ್ಳಿಯಲ್ಲಿ ಘಟನೆ ನಡೆದಿದ್ದು, ಬೇಲೂರು ಬಿಜೆಪಿ ಅಭ್ಯರ್ಥಿ ಎಚ್.ಕೆ ಸುರೇಶ್ ಮತದಾರರಿಗೆ ಈ ಹಿಂದೆ ಕುಕ್ಕರ್‌ಗಳನ್ನು ಹಂಚಿದ್ದರು. ಆದ್ರೆ ಶನಿವಾರ ಶೇಷಮ್ಮ ಎಂಬುವವರ ಮನೆಯಲ್ಲಿ ಅನ್ನ ಮಾಡಲು ಕುಕ್ಕರ್ ಇಟ್ಟಿದ್ದಾಗ ಬ್ಲಾಸ್ಟ್ ಆಗಿತ್ತು. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲವಾದರೂ ಸಂಭವಿಸಬಹುದಾದ ದೊಡ್ಡ ಅವಘಡವೊಂದು ತಪ್ಪಿದೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಚುನಾವಣಾ ಅಧಿಕಾರಿಗಳು ಇಂದು ಹಲವು ಗ್ರಾಮಗಳಿಗೆ ಭೇಟಿ ನೀಡಿ, ಯಾರ್‍ಯಾರು ಕುಕ್ಕರ್ ಪಡೆದಿದ್ದೀರಾ ವಾಪಾಸ್ ನೀಡಿ, ಕೆಲವು ಕುಕ್ಕರ್‌ಗಳು ಸ್ಪೋಟಗೊಳ್ಳುತ್ತಿವೆ ಎಂದು ಎಚ್ಚರಿಕೆ ನೀಡಿ ನಲವತ್ತಕ್ಕೂ ಹೆಚ್ಚು ಕುಕ್ಕರ್‌ಗಳನ್ನು ತಹಶೀಲ್ದಾರ ಮಮತಾ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಗಿದೆ.