ಹಾಸನ: ಜಿಲ್ಲೆಯಲ್ಲಿ ಜೆಡಿಎಸ್‌ನಿಂದ ಆಗಿರೋ ಅಭಿವೃದ್ಧಿ ಮಾಹಿತಿ ಪುಸ್ತಕ ಬಿಡುಗಡೆ ಮಾಡುವ ಮೂಲಕ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಚಿವ ಹೆಚ್.ಡಿ.ರೇವಣ್ಣನವರು ಮುಸ್ಲಿಂರ ಮೀಸಲಾತಿ ಕಿತ್ತುಕೊಂಡು, ಒಕ್ಕಲಿಗರು ಮತ್ತು ಲಿಂಗಾಯಿತರಿಗೆ ನೀಡಿದ್ದಾರೆ. ನೈತಿಕತೆ ಇದ್ದರೆ ಕೂಡಲೇ ಮುಸ್ಲಿಂ ಸಮುದಾಯವು ಎಲ್ಲಾ ಕಡೆ ಧರಣಿ ಮಾಡಬೇಕೆಂದು ಕರೆ ಕೊಟ್ಟರು.
ಸೋಮವಾರ ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಹಾಸನ ಜಿಲ್ಲೆಗೆ ಮೆಡಿಕಲ್ ಕಾಲೇಜ್, ನರ್ಸಿಂಗ್ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಮೆಗಾ ಡೈರಿ, ರೈಲ್ವೆ ಹೆದ್ದಾರಿ ಸೇರಿ ಎಲ್ಲಾ ರೀತಿಯ ಅಭಿವೃದ್ಧಿ ಮಾಡಿದ್ದು ಜೆಡಿಎಸ್ ಪಕ್ಷ. ಜಿಲ್ಲೆಯ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ಹಣ ಬಿಡುಗಡೆ ಮಾಡಿಸಲಾಗಿದೆ. ಕೆಲವರು ಜೆಡಿಎಸ್ ಏನು ಮಾಡಿದೆ ಎಂದು ಕೇಳುತ್ತಾರೆ. ಈ ಪುಸ್ತಕವನ್ನು ಜಿಲ್ಲೆಯ ಮನೆ ಮನೆಗೆ ಜೆಡಿಎಸ್ ನಿಂದ ನೀಡಲಾಗುತ್ತಿದೆ. ರಾಜ್ಯದ ೨೨೪ ಕ್ಷೇತ್ರದಲ್ಲಿ ಎಲ್ಲಿಯು ಆಗದಷ್ಟು ಬಾರ್ ಓಪನ್ ಮಾಡಿದ್ದು ಹಾಸನ ಕ್ಷೇತ್ರದ ಸಾದನೆ ಎಂದು ರಾಜ್ಯದಲ್ಲಿ ಹಾಸನ ಕ್ಷೇತ್ರಕ್ಕೆ ಅನುದಾನ ಬಂದಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಮಾಹಿತಿ ಪುಸ್ತಕ ಬಿಡುಗಡೆ ಮೂಲಕ ರೇವಣ್ಣ ತಿರುಗೇಟು ನೀಡಿದರು.
ಮೀಸಲಾತಿ ಹಂಚಿಕೆಯಲ್ಲಿ ಮಾರ್ಪಾಡು ಮಾಡಿದ ವಿಚಾರವಾಗಿ ಮಾತನಾಡುತ್ತಾ, ಇಷ್ಟು ದಿನ ಯಾಕೆ ಇವರು ಮೀಸಲಾತಿ ಬಗ್ಗೆ ಮಾತಾಡಿರಲಿಲ್ಲ. ಮುಸ್ಲಿಂ ರಿಗೆ ಮೀಸಲಾತಿ ಕೊಟ್ಟಿದ್ದು ದೇವೇಗೌಡರು, ಅದು ಈಗ ಎಲ್ಲರಿಗು ಗೊತ್ತಾಗ್ತಾ ಇದೆ. ದೇವೇಗೌಡರು ಕೊಟ್ಟ ಮೀಸಲಾತಿ ಯಾಕೆ ತೆಗೆದರು? ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಕೆ.ಎಂ.ರಾಜೇಗೌಡ, ಜಿಲ್ಲಾ ವಕ್ತಾರ ರಘು ಹೊಂಗೆರೆ ಇದ್ದರು.