ಚನ್ನರಾಯಪಟ್ಟಣ: ತಾಲೂಕಿನ ದಂಡಿಗನಹಳ್ಳಿ ಹೋಬಳಿಯ ಶಾಂತಿಗ್ರಾಮ ಮಂಡಲದ ವತಿಯಿಂದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಪೂರ್ವಭಾವಿ ಸಭೆಯು ಶಾಂತಿಗ್ರಾಮದಲ್ಲಿ ನಡೆಯಿತು.
ದಂಡಿಗನಹಳ್ಳಿ ಹೋಬಳಿ, ಶಾಂತಿಗ್ರಾಮ ಹೋಬಳಿ, ದುದ್ದ ಹೋಬಳಿ ಹಾಗೂ ಹೊಳೆ ನರಸೀಪುರದ ಹಲವು ಏತ ನೀರಾವರಿ ಯೋಜನೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಾಡಿದ್ದು, ರೈತರಿಗೆ ಮನವರಿಕೆ ಮಾಡಿ ಮತ ಯಾಚನೆ ಮಾಡುತ್ತೇವೆ ಎಂದು ಶಾಂತಿಗ್ರಾಮ ಮಂಡಲ ಅಧ್ಯಕ್ಷ ಶ್ರೀಪತಿ ಶ್ರೀನಿವಾಸ ತಿಳಿಸಿದರು.
ಹೊಳೆನರಸೀಪುರ ಮಂಡಲ ಅಧ್ಯಕ್ಷ ನಾರಾಯಣಗೌಡ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಪ್ರವೀಣ, ಹೊಳೆನರಸೀಪುರ ವಿಧಾನಸಭಾ ಚುನಾವಣಾ ಉಸ್ತುವಾರಿ ಎಚ್‌ಎಂಟಿ ಸುರೇಶ, ಬಿಜೆಪಿ ಒಬಿಸಿ ಜಿಲ್ಲಾಧ್ಯಕ್ಷ ಮೈಲಾರಪ್ಪ, ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರು ಹಾಗೂ ಬಿಜೆಪಿ ಪಕ್ಷದ ಆಕಾಂಕ್ಷಿಗಳಾದ ವಕೀಲ ದೇವರಾಜೇಗೌಡ, ರಾಜುಗೌಡ, ಆಲದಹಳ್ಳಿ ಶ್ರೀನಿವಾಸ, ಬಿಜೆಪಿ ಎಸ್ಸಿ ಮೋರ್ಚ ಮುಖಂಡರಾದ ಎಚ್.ಆರ್ ನಾಗೇಂದ್ರ, ಹೊಳೆನರಸೀಪುರ ತಾಲೂಕಿನ ಪದಾಧಿಕಾರಿಗಳು, ಚನ್ನರಾಯ ಪಟ್ಟಣ ತಾಲೂಕಿನ ದಂಡಿಗನ ಹಳ್ಳಿ, ಹಾಸನ ತಾಲೂಕಿನ ಶಾಂತಿ ಗ್ರಾಮ ಹೋಬಳಿಯ ಬಿಜೆಪಿ ಮುಖಂಡರು ಇದ್ದರು.