ಚನ್ನರಾಯಪಟ್ಟಣ: ಜಾತ್ಯಾತೀತ ಕರುನಾಡ ಯುವಶಕ್ತಿ ಸಂಘದ ತಾಲೂಕು ಘಟಕ ನೂತನ ಕಚೇರಿ ಉದ್ಘಾಟನಾ ಸಮಾರಂಭ ನಡೆಯಿತು. ನೂತನ ಕಚೇರಿಯ ಉದ್ಘಾಟನೆ ನೆರವೇರಿಸಿದ ಶಾಸಕ ಸಿ.ಎನ್ ಬಾಲಕೃಷ್ಣ ಮಾತನಾಡಿ, ಕರುನಾಡಿನಲ್ಲಿ ಕನ್ನಡಿಗರೇ ಸರ್ವಭೌಮರು, ಕರ್ನಾಟಕ ರಾಜ್ಯದಲ್ಲಿ ಕನ್ನಡ, ನಾಡು, ನುಡಿ, ಜಲ, ಗಡಿ ವಿಚಾರದಲ್ಲಿ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿರುವ ಎಲ್ಲಾ ಕನ್ನಡಿಗರಿಗೂ ಅಭಿನಂದನೆಗಳು ಸಲ್ಲಿಸುತ್ತೇನೆ. ಚನ್ನರಾಯಪಟ್ಟಣ ತಾಲೂಕಿನಾದ್ಯಂತ ಜಾತ್ಯಾತೀತ ಕರುನಾಡ ಯುವಶಕ್ತಿ ಸಂಘದ ತಾಲೂಕು ಅಧ್ಯಕ್ಷ ಜೆ.ಎನ್ ಶರತ್ ಅವರ ನೇತೃತ್ವದಲ್ಲಿ ಸಂಘಟನೆಯು ಸದೃಢವಾಗಿ ನಡೆಯಲಿ. ನಾಡು, ನುಡಿ, ಜಲದ ವಿಚಾರದಲ್ಲಿ ಪ್ರಾಮಾಣಿಕವಾದ ಹೋರಾಟವನ್ನು ಮಾಡುವ ಮೂಲಕ ನ್ಯಾಯ ಒದಗಿಸುವ ಕಡೆಗೆ ನಿರಂತರವಾಗಿ ಹೋರಾಟ ಮಾಡಬೇಕು ಎಂದರು.
ಕರುನಾಡ ಯುವಶಕ್ತಿ ಸಂಘದ ತಾಲೂಕು ಘಟಕ ನೂತನ ಕಚೇರಿ ಉದ್ಘಾಟನಾ ಸಮಾರಂಭ

Photo Credit :
Bharath
MANY DROPS MAKE AN OCEAN
Support NewsKarnataka's quality independent journalism with a small contribution.