ಬೇಲೂರು: ಬೇಲೂರು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದ ವಿದ್ಯುನ್ಮಾನ ಮತ ಯಂತ್ರಗಳನ್ನು ಪೋಲೀಸ್ ಬಂದೋಬಸ್ತಿನೊಂದಿಗೆ ವೈ.ಡಿ.ಡಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿರ್ಮಿಸಿರುವ ಭದ್ರತಾ ಕೊಠಡಿಯಲ್ಲಿ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಸುರಕ್ಷಿತವಾಗಿ ಇರಿಸಲಾಗಿದೆ.
ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಶಂಕರ, ಸಹಾಯಕ ಚುನಾವಣಾಧಿಕಾರಿ ತಹಶೀಲ್ದಾರ ಎಂ.ಮಮತಾ, ಸಿಪಿಐ ರವಿಕಿರಣ, ವಿದ್ಯುನ್ಮಾನ ನ್ಯೂಡಲ್ ಅಧಿಕಾರಿಗಳು, ಬಿಜೆಪಿ ನಗರ ಅಧ್ಯಕ್ಷ ವಿನಯ್ ಇದ್ದರು.