ಬೇಲೂರು: ವಿಶ್ವ ವಿಖ್ಯಾತ ಬೇಲೂರು ನೆಹರು ನಗರದ ತಾಲೂಕು ಆಡಳಿತ ಸೌಧ ಮುಂದೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಕಂಚಿನ ಪ್ರತಿಮೆಯನ್ನು ಪ್ರತಿಷ್ಠಾಪನೆ ನಡೆಸಿದಲ್ಲದೆ ಶಾಸಕ ಕೆ.ಎಸ್.ಲಿಂಗೇಶ್ ಮತ್ತು ಮೈಸೂರಿನ ಊರಿಲಿಂಗಿ ಪೆದ್ದಿಮಠದ ಶ್ರೀ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿಗಳು ಸೇರಿದಂತೆ ಹತ್ತಾರು ಗಣ್ಯರ ಸಮ್ಮುಖದಲ್ಲಿ ವೈಭವದಿಂದ ಹೂಮಳೆಗೈಯುವ ಮೂಲಕ ಪ್ರತಿಮೆ ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಜನಪದ ತಂಡದೊಂದಿಗೆ ಪಟ್ಟಣದ ಪ್ರಮುಖ ಬೀದಿಯಲ್ಲಿ ಅಂಬೇಡ್ಕರ್ ಬಾವುಟ ಹಿಡಿದು ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ, ತಾಲೂಕು ಜೆಡಿಎಸ್ ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಮಾಜಿ ಸಫಾಯಿ ಕರ್ಮಚಾರಿ ಅಧ್ಯಕ್ಷ ಎಂ.ಆರ್.ವೆಂಕಟೇಶ, ಕಾಂಗ್ರೆಸ್ ಮುಖಂಡರಾದ ಗ್ರಾನೈಟ್ ರಾಜಶೇಖರ ಮತ್ತು ವೈ.ಎನ್.ಕೃಷ್ಙೇಗೌಡ, ದಲಿತ ಮುಖಂಡ ಮರಿಯಪ್ಪ ಮತ್ತು ಮುಖಂಡರಾದ ಗಂಗಾಧರ ಬಹುಜನ, ಸಿ.ಎನ್.ದಾನಿ, ದೊಡ್ಡವೀರೇಗೌಡ, ಕನಾಯಕನಹಳ್ಳಿ ಮಹಾದೇವ, ಲತಾ ಮಂಜೇಶ್ವರಿ, ಡಿ.ಬಿ.ಮೋಹನ್ ಕುಮಾರ, ಜಿ.ಟಿ.ಇಂದಿರಾ ಇನ್ನೂ ಮುಂತಾದವರು ಹಾಜರಿದ್ದರು.