ಚನ್ನರಾಯಪಟ್ಟಣ: ತಾಲೂಕಿನ ಕಸಬಾ ಹೋಬಳಿಯ ಪಿ ದಾಸಾಪುರ ಗ್ರಾಮದಲ್ಲಿ ಪಂಚಶೀಲ ಬುದ್ಧ ವಿಹಾರ ಲೋಕಾರ್ಪಣೆಗೊಂಡಿದೆ. ಬುದ್ಧನ ಅನುಯಾಯಿಗಳು ಈ ಕ್ಷೇತ್ರಕ್ಕೆ ಭೇಟಿ ನೀಡಿ ಭಗವಾನ್ ಬುದ್ಧರ ದರ್ಶನ ಪಡೆದು, ಬೆಟ್ಟದ ಮೇಲೆ ಕುಳಿತಿರುವ ಭಗವಾನ ಬುದ್ಧರ ಮೂರ್ತಿಯ ದೃಶ್ಯವನ್ನು ನೋಡಿ ಪಾವನರಾಗಬೇಕು, ರಮಣೀಯವಾದ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಳ್ಳಬೇಕೆಂದು ಬೌದ್ಧ ಉಪಾಸಕ ರವಿಚಂದ್ರ ಮನವಿ ಮಾಡಿದರು.
ಪಂಚಶೀಲ ಬುದ್ಧ ವಿಹಾರ ಪ್ರದೇಶದಲ್ಲಿ ಬೌದ್ಧ ಧರ್ಮದ ಧ್ಯಾನ ಕೇಂದ್ರ, ಬೌದ್ಧ ಧರ್ಮ ಪ್ರವಚನ ಕೇಂದ್ರ, ಉಚಿತ ಶಿಕ್ಷಣ ಸಂಸ್ಥೆ, ಅನಾಥಾಶ್ರಮ, ವೃದ್ಧಾಶ್ರಮ, ಉಚಿತ ಆಸ್ಪತ್ರೆಯನ್ನು ಪ್ರಾರಂಭ ಮಾಡುವ ಆಲೋಚನೆಯನ್ನು ಹೊಂದಿದ್ದು, ನಾಡಿನ ಸಮಸ್ತ ಬಂಧುಗಳು ಹಾಗೂ ಭಗವಾನ ಬುದ್ಧ ಮತ್ತು ಅಂಬೇಡ್ಕರ್ ಅವರ ಅನುಯಾಯಿಗಳು ಈ ಸ್ಥಳಕ್ಕೆ ಒಮ್ಮೆ ಭೇಟಿ ನೀಡಿ ಭಗವಾನ ಬುದ್ಧರ ದರ್ಶನವನ್ನು ಪಡೆಯಲು ಮನವಿ ಮಾಡಿದ್ದಾರೆ.