ಆಲೂರು: ಮಾಜಿ ಸಂಸದರು, ಕೆಪಿಸಿಸಿ ಕಾರ್ಯಧ್ಯಕ್ಷರು ಆದ ಧ್ರುವ ನಾರಾಯಣರವರು ಇಂದು ಹಠಾತ್ ನಿಧನರಾದ ಹಿನ್ನಲೆಯಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಸಭೆ ಸೇರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಕೆಪಿಸಿಸಿ ಸದಸ್ಯ ಹೆಚ್.ಪಿ ಮೋಹನ ಮಾತನಾಡಿ, ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ, ಸಂಘಟಕ, ಅಜಾತಶತ್ರು ಆಗಿದ್ದ ಧ್ರುವ ನಾರಾಯಣರವರು ಶಾಸಕರಾಗಿ, ಸಂಸದರಾಗಿ ಸೇವೆ ಸಲ್ಲಿಸಿದ್ದಾರೆ. ಹಾಸನ ಜಿಲ್ಲಾ ಉಸ್ತುವಾರಿಯಾಗಿದ್ದ ಅವರು ಜಿಲ್ಲೆಯಲ್ಲಿ ಪಕ್ಷವನ್ನು ಬಲವಾಗಿ ಸಂಘಟಿಸಿದ್ದರು ಎಂದರು.
ಧ್ರುವ ನಾರಾಯಣರವರ ವ್ಯಕ್ತಿತ್ವ ಕುರಿತಾಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಎಸ್. ಶಿವಮೂರ್ತಿ, ಶಾಂತಕೃಷ್ಣ, ರಂಗಯ್ಯ, ಧರ್ಮಪ್ಪ, ಟೀಕ್ ರಾಜ್, ರಂಗೇಗೌಡ, ಲೋಕೇಶ್, ಸುರೇಶ್ ಮಾತನಾಡಿದರು.
ಶ್ರದ್ದಾಂಜಲಿ ಸಭೆಯಲ್ಲಿ ಮಾಜಿ ಕೆಪಿಸಿಸಿ ಸದಸ್ಯ ಹೆಚ್. ಪಿ. ಮೋಹನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಎಸ್. ಶಿವಮೂರ್ತಿ, ತಾ.ಪಂ ಮಾಜಿ ಸದಸ್ಯ ಎಂ. ಹೆಚ್. ರಂಗೇಗೌಡ, ಪ.ಪಂ ಸದಸ್ಯೆ ತಾಹೇರಾ ಬೇಗಂ, ಮುಖಂಡರುಗಳಾದ ಶಾಂತಕೃಷ್ಣ, ರಂಗಯ್ಯ, ಶಾಂತಪ್ಪ, ಟೀಕ್ ರಾಜ್, ಧರ್ಮಣ್ಣ, ಹೊನ್ನಪ್ಪ, ಖಾಲೀದ್ ಪಾಷಾ, ಸರ್ವರ್ ಪಾಷಾ, ಲೋಕೇಶ್ ಅಜ್ಜೇನಹಳ್ಳಿ, ಸುರೇಶ್, ಲೋಹಿತ್, ಶೇಖರ್, ಕಾಂತರಾಜು, ಸಗನಯ್ಯ ಸೇರಿದಂತೆ ಇತರರು ಇದ್ದರು.