ಸಕಲೇಶಪುರ: ಸಕಲೇಶಪುರ ತಾಲೂಕು ಯಾಸಳೂರು ಹೋಬಳಿಯ ಶುಕ್ರವಾರ ಸಂತೆಯ ಶೆಟ್ಟಿಹಳ್ಳಿ ಅಂಗಡಿಯೊಂದರಲ್ಲಿ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯವನ್ನು ಯಸಳೂರು ಪಿಎಸ್‌ಐ ನವೀನ್ ಎಚ್.ಕೆ ನೇತೃತ್ವದ ತಂಡವು ವಶಪಡಿಸಿಕೊಂಡಿದೆ.
ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ನವೀನ್ ಎಚ್.ಕೆ ಹಾಗೂ ಅವರ ತಂಡ ಶುಕ್ರವಾರ ಸಂತೆಯ ಶೆಟ್ಟಿಹಳ್ಳಿಯ ಜಯಪ್ರಕಾಶ್ ಬಿನ್ ಮಂಜುನಾಥ (೩೯) ಇವರ ಅಂಗಡಿಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಮದ್ಯ ವಶಪಡಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.