ಹಾಸನ: ನಗರದ ಎಂ.ಜಿ.ರಸ್ತೆ ಬಳಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದ್ದು, ಆಯತಪ್ಪಿ ಬಿದ್ದು ತಲೆಗೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿರುವುದಾಗಿ ಪೊಲೀಸರ ಶಂಕಿಸಿದ್ದಾರೆ.
ಮಾ. 31ರಂದು ಚೀತಾ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಮೃತದೇಹ ಪತ್ತೆಯಾಗಿದ್ದು ಸುತ್ತಮುತ್ತ ವಿಚಾರಿಸಿದರು. ಯಾವುದೇ ಮಾಹಿತಿ ದೊರೆಯದ ಕಾರಣ ಶವಾಗಾರಕ್ಕೆ ಸಾಗಿಸಿದ್ದಾರೆ. ಮೃತನು ಸಾಧಾರಣ ಮೈಕಟ್ಟನ್ನು ಹೊಂದಿದ್ದು ಆಕಾಶ ನೀಲಿ ಟೀ ಶರ್ಟ್, ನೀಲಿ ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ತಲೆಯ ಎಡ ಭಾಗ ರಕ್ತ ಹೆಪ್ಪುಗಟ್ಟಿದಂತೆ ಗಾಯ ಕಾಣಿಸಿದ್ದು, ಬಿದ್ದು ಗಾಯವಾಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ.