News Karnataka
ಕ್ರೈಂ

ಹಣಕಾಸಿನ ವಿಚಾರಕ್ಕೆ ಸ್ನೇಹಿತನ ಕೊಲೆ

A case of murdering his friend over financial issues recently took place in Bagadi village and two accused have been arrested.
Photo Credit : Bharath

ಹಾಸನ: ಹಣಕಾಸಿನ ವಿಚಾರಕ್ಕೆ ತನ್ನ ಸ್ನೇಹಿತನನ್ನೆ ಕೊಲೆ ಮಾಡಿರುವ ಪ್ರಕರಣ ಇತ್ತೀಚೆಗೆ ಸಕಲೇಶಪುರ ತಾಲೂಕಿನ ಬ್ಯಾಗಡಹಳ್ಳಿಯಲ್ಲಿ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಎಸ್‌ಪಿ ಹರಿರಾಂ ಶಂಕರ್ ಮಾಹಿತಿ ನೀಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆತ್ತೂರು ಹೋಬಳಿ ಬ್ಯಾಗಡಹಳ್ಳಿ ಗ್ರಾಮದ ಸುನಿಲ್ ಕುಮಾರ್ ಎಂಬಾತನ ಮೇಲೆ ಅದೇ ಗ್ರಾಮದ ಸ್ನೇಹಿತರೆ ಆದ ಚಂದನ್‌ ಹಾಗೂ ಸತೀಶ ಎಂಬ ಇಬ್ಬರು ಆರೋಪಿಗಳು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾರೆ, ಮೃತ ಸುನಿಲ್ ಆರೋಪಿ ಸತೀಶ ಎಂಬಾತನಿಗೆ ಕೊಡಬೇಕಿದ್ದ ೨೦ ಸಾವಿರ ಹಣವನ್ನು ವಾಪಸ್ ಕೊಡುವಂತೆ ಕೇಳಲಾಗಿ ಇದೆ ವಿಚಾರಕ್ಕೆ ಗಲಾಟೆ ನಡೆದು ಕೊಲೆ ಮಾಡಲಾಗಿದೆ.

ಮೂವರು ಒಟ್ಟಿಗೆ ಮಧ್ಯದ ಅಂಗಡಿಯಿಂದ ಮಧ್ಯ ಖರೀದಿಸಿ ಸತೀಶ್ ಅವರ ತೋಟಕ್ಕೆ ಆಗಮಿಸಿ ಪಾರ್ಟಿ ಮಾಡಿದ್ದು ನಂತರ ಪರಸ್ಪರ ವಾಗ್ವಾದ ಮತ್ತು ಗಲಾಟೆ ನಡೆದಿದೆ. ಪ್ರಕರಣವನ್ನು ಸಕಲೇಶಪುರ ಅಪರ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್, ವೃತ್ತ ನಿರೀಕ್ಷಕರಾದ ಚೈತನ್ಯ, ಸಬ್ ಇನ್ಸ್‌ಪೆಕ್ಟರ್ ನವೀನ ಅವರ ತಂಡ ಈ ಪ್ರಕರಣವನ್ನು ಭೇದಿಸಿದೆ ಎಂದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *