ಸಕಲೇಶಪುರ: ಅಳಿವಿನಂಚಿನಲ್ಲಿರುವ ವನ್ಯಪ್ರಾಣಿ ಕಡವೆಯನ್ನು ಕೊಂದು ತಂದು ಮನೆಯಲ್ಲಿ ಶೇಖರಿಸಿ ಇಟ್ಟಿರುವ ಬಗ್ಗೆ ಒಬ್ಬ ಆರೋಪಿಯನ್ನು ಮಾಂಸ ಸಮೇತ ಬಂಧಿಸಿ, ಯಸಳೂರು ಅರಣ್ಯ ಅಧಿಕಾರಿಗಳು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹೆತ್ತೂರು ಹೋಬಳಿ ಹೊಸಹಳ್ಳಿ ಗ್ರಾಮದ ನಿವಾಸಿ ಹೆಚ್.ಎಂ ಪ್ರಮೋದ ಬಿನ್ ಹೆಚ್.ಡಿ ಮಂಜುನಾಥರವರ ಮನೆಯ ರೆಫ್ರಿಜರೇಟರ್‌ನಲ್ಲಿ ಸುಮಾರು ೦.೯೦೦ ಕೆಜಿ ತೂಕದ ತುಂಡು ಮಾಡಿದ ಕಡವೆಯ ಹಸಿ ಮಾಂಸವನ್ನು ಶೇಖರಿಸಿಟ್ಟದ್ದ ಬಗ್ಗೆ ಖಚಿತ ಮಾಹಿತಿಯೊಂದಿಗೆ ಸುರೇಶ್ ಸಿಎನ್ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದಲ್ಲಿ ಜಗದೀಶ ಜಿ. ಆರ್ ವಲಯ ಅರಣ್ಯಾ ಅಧಿಕಾರಿಗಳ ತಂಡ ದಾಳಿ ನಡೆಸಿ ಆರೋಪಿ ಹೆಚ್.ಎಂ ಪ್ರಮೋದ್ ಬಿನ್ ಹೆಚ್.ಡಿ ಮಂಜುನಾಥರನ್ನು ಮಾಂಸ ಸಮೇತ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಕಲಂ ೨(೧೬), ೨(೨೦), ೨(೩೬), ೯, ೩೯, ೫೦ ಮತ್ತು ೫೧ರ ಪ್ರಕಾರ ಬಂಧಿಸಿ ನ್ಯಾಯಾಂಗ ಬಂದನಕ್ಕೆ ಒಪ್ಪಿಸಿದ್ದು, ಈ ಸಂದರ್ಭದಲ್ಲಿ ಉಪ ವಲಯ ಅರಣ್ಯಾಧಿಕಾರಿ ವಿಜಯ ಕುಮಾರ ಜಿ.ಎಸ್. ನರಸಿಂಹ ಮೂರ್ತಿ .ಕೆ, ಗಸ್ತು ವನಪಾಲಕ ನವೀನ್ ಕುಮಾರ್ ಎಸ್. ಆರ್ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಇದ್ದರು.