ಸಕಲೇಶಪುರ: ವೈಯುಕ್ತಿಕ ದ್ವೇಷದಿಂದ ಕುಡಿದ ಮತ್ತಿನಲ್ಲಿ ಯುವಕನ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಬ್ಯಾಗಡಿಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಹೆತ್ತೂರು ಹೋಬಳಿ ವನಗೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಗಡಹಳ್ಳಿ ಗ್ರಾಮದ ಸುನಿಲ್ ಕುಮಾರ್ (30) ಹತ್ಯೆಯಾದ ಯುವಕ. ಇದೇ ಗ್ರಾಮದ ಇಬ್ಬರು ಯುವಕರೊಂದಿಗೆ ಸುನಿಲ್ ಕುಮಾರ್ ಭಾನುವಾರ ರಾತ್ರಿ ಎಣ್ಣೆ ಪಾರ್ಟಿ ಮಾಡುತ್ತಿದ್ದು, ಈ ಹಿಂದಿನ ವೈಯಕ್ತಿಕ ದ್ವೇಷದ ಕಾರಣ ಜಗಳವಾಗಿದ್ದು, ಜಗಳ ತಾರಕಕ್ಕೇರಿದ್ದು, ಸುನಿಲ್ ಕುಮಾರ್ ತಲೆ ಮೇಲೆ ಕಲ್ಲು ಹಾಕಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಈ ಸಂಬಂಧ ಸತೀಶ್, ಚಂದನ್ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸ್ಥಳಕ್ಕೆ ಎಸ್‌ಪಿ ಹರಿರಾಂ ಶಂಕರ್ ಅವರು ಭೇಟಿ ನೀಡಿದ್ದಾರೆ.