ಹಾಸನ: ಸಾತನೂರಿನಲ್ಲಿ ನಡೆದ ಇರ್ಷದ್ ಹತ್ಯೆ ಸಂಬಂಧ ಪುನೀತ್ ಕೆರೆಹಳ್ಳಿ ಅವರನ್ನು ಯುಎಪಿಎ ಕಾಯ್ದೆ ಅಡಿ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಟಿಪ್ಪು ಸಂಘರ್ಷ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮುಬಾಶೀರ್ ಅಹಮದ್ ಒತ್ತಾಯಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುನೀತ್ ಕೆರೆಹಳ್ಳಿ ಎಂಬ ವ್ಯಕ್ತಿ ರಾಷ್ಟ್ರೀಯ ರಕ್ಷಣಾ ಪಡೆ ಎಂಬ ತಂಡವನ್ನು ಕಟ್ಟಿಕೊಂಡು ಜನರನ್ನು ಭಾವನಾತ್ಮಕವಾಗಿ ಕೆರಳಿಸುತ್ತಿದ್ದಾನೆ.
ಈತನು ಬೆಂಗಳೂರಿನ ಹೊರ ವಲಯದಲ್ಲಿ ಮಾರಕಸ್ತ್ರಗಳನ್ನು ಹಿಡಿದು ದಬ್ಬಾಳಕ್ಕೆ ಮಾಡುತ್ತಿರುವ ಪ್ರಕರಣವು ವರದಿಯಾಗಿದೆ. ಅಲ್ಲದೆ ಇತ್ತೀಚೆಗೆ ದನಗಳನ್ನು ಸಾಗಿಸುತ್ತಿದ್ದ ಎಂಬ ಕಾರಣಕ್ಕೆ ಇರ್ಷದ್ ಎಂಬ ಯುವಕನನ್ನು ಕೊಲೆ ಮಾಡಿರುವ ಸಂಬಂಧ ಪ್ರಕರಣವು ದಾಖಲಾಗಿದ್ದು, ಇದುವರೆಗೂ ಸಹ ಆತನನ್ನು ಬಂಧಿಸಿಲ್ಲ. ಆದ್ದರಿಂದ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ದಳಕ್ಕೆ ವಹಿಸಿ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಆಗ್ರಹಿಸಿದರು.
ಪ್ರದೀಪ್, ಮಲ್ಲೇಶ್ ಅಂಬುಗ, ಪ್ರಸಾದ್, ರಿಯಾಜ್, ಸಯ್ಯದ್ ಅನ್ಸರ್ ಇದ್ದರು.