ಚನ್ನರಾಯಪಟ್ಟಣ: ಸ್ನೇಹಿತರನ್ನು ಕೊಲೆ ಮಾಡಿ ಕೆರೆ ಬಳಿ ಮರಳಿನಲ್ಲಿ ಹೂತು ಹಾಕಿದ್ದ, ಯಲಿಯೂರಿನ ೪೨ ವರ್ಷದ ಮಧುಕುಮಾರ್ ಎಂಬಾತನಿಗೆ ಜೀವಾವಧಿ ಶಿಕ್ಷೆಯನ್ನು ನ್ಯಾಯಾಲಯ ವಿಧಿಸಿದೆ. ೨೦೧೭ಕ್ಕೂ ಹಿಂದಿನ ಪ್ರಕರಣ ಇದಾಗಿದ್ದು, ಚನ್ನರಾಯಪಟ್ಟಣ ತಾಲೂಕ್ ನ ಯಲಿಯೂರು ಗ್ರಾಮದ ಮರಗೆಲಸಗಾರನಾಗಿದ್ದ ಮಧುಕುಮಾರ್ ಹಲವು ಪ್ರಕರಣಗಳಲ್ಲಿ ಅಪರಾಧಿಯಾಗಿದ್ದ. ಇವನ ಸಂಗಡ ಬಸವರಾಜು ಎಂಬ ಮತ್ತೊಬ್ಬ ಅಪರಾಧಿ ಸ್ನೇಹಿತನಾದ, ಮಧುಕುಮಾರ್‌ನ ಹೆಂಡತಿಯ ಅತ್ಯಾಚಾರಕ್ಕೆ ಬಸವರಾಜ್ ಯತ್ನಿಸಿದ್ದನು.
ತಲೆ ಮರೆಸಿಕೊಂಡಿದ್ದ ಬಸವರಾಜು, ಪೋಲೀಸರು ಬೆನ್ನಟ್ಟಿದಾಗ, ಮಧುಕುಮಾರ್‌ನ ಬಳಿ ಬಂದಿದ್ದ, ಈ ಸಂದರ್ಭ ಉಪಯೋಗಿಸಿಕೊಂಡ ಮಧುಕುಮಾರ್ ಯಲಿಯೂರಿಗೆ ಕರೆ ತಂದು ಕುಡಿಸಿ, ಗಾಂಜಾ ನೀಡಿ, ಪ್ರಜ್ಞೆ ತಪ್ಪಿದಾಗ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ಕೆರೆ ಬಳಿ ಮರಳಿನಲ್ಲಿ ಹೂತು ಹಾಕಿದ್ದನು. ಘಟನೆ ಬಗ್ಗೆ ಮಧುಕುಮಾರ್ ಬೆಂಗಳೂರಿನ ಪೋಲೀಸರು ಕಳ್ಳತನ ಮಾಡಿದ್ದ ಬಗ್ಗೆ ತನಿಖೆ ಮಾಡಿದಾಗ ಬಾಯಿ ಬಿಟ್ಟ. ಯಲಿಯೂರಿನ ಕೆರೆ ಬಳಿ ತನಿಖೆ ಮಾಡಿದಾಗ ಬಾಯಿ ಬಿಟ್ಟ.
ಯಲಿಯೂರಿನ ಕೆರೆ ಬಳಿ ತನಿಖೆ ನಡೆಸಿದಾಗ ಬಸವರಾಜನ ಅಸ್ಥಿ ಪಂಜರ ಪತ್ತೆಯಾಗಿ ದೃಡಪಟ್ಟಿತ್ತು. ಅಂದಿನ ಪೋಲೀಸ್ ತನಿಖಾಧಿಕಾರಿ ರೇಖಾ ಬಾಯಿ ಕೇಸು ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದರು. ೪ನೇ ಅಧಿಕಾ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯ ವಿ.ಎನ್. ಜಗದೀಶ್ ಮಾರ್ಚ್ ೩೧ರಂದು ತೀರ್ಪು ನೀಡಿ ಮಧುಕುಮಾರ್‌ಗೆ ಜೀವಾವಧಿ ಶಿಕ್ಷೆ ಹಾಗೂ ೧೦ ಸಾವಿರ ದಂಡ ವಿಧಿಸಿದ್ದಾರೆ.