ಅರಸೀಕೆರೆ: ಬಾಣಾವರದಿಂದ ಹುಳಿಯಾರ್ ಮಾರ್ಗವಾಗಿ ಸಂಚಾರಿಸುವ ರಸ್ತೆಯಲ್ಲಿ ಜಿಪುರ ಗ್ರಾಮದ ಬಸ್ ನಿಲ್ದಾಣ ಬಳಿ 12 ವರ್ಷದ ಬಾಲಕಿಗೆ ಕಾರು ವೇಗವಾಗಿ ಗುದ್ದಿದ ಪರಿಣಾಮ ತೀವ್ರ ರಕ್ತಸ್ರಾವದಿಂದ ಮರಣ ಹೊಂದಿದ್ದಳೆ.
ರಾಷ್ಟ್ರೀಯ ಹೆದ್ದಾರಿ ಆದ ಪರಿಣಾಮ ಈ ರೀತಿ ಹೆಚ್ಚು ಅಪಘಾತಗಳು ಸಂಭವಿಸಿದರೂ ಅಧಿಕಾರಿಗಳು ವೇಗ ನಿಯಂತ್ರಣ (ಹಂಪ್)ಗಳನ್ನ ಹಾಕದೆ ಬೇಜವಾಬ್ದಾರಿ ತೋರಿದ್ದು, ಈ ಕೂಡಲೇ ಸಾರ್ವಜನಿಕರು ಹಂಪ್ ಅಳವಡಿಸುವಂತೆ ಆಗ್ರಹಿಸಿದರು.