ಬೇಲೂರು: ಕೀಟನಾಶಕ ಸೇವಿಸಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಂಬಿ ದಿಣ್ಣೆ ಗ್ರಾಮದಲ್ಲಿ ಜರುಗಿದೆ. ಬೇಲೂರು ತಾಲ್ಲೂಕಿನ ಕಂಬಿ ದಿಣ್ಣೆ ಗ್ರಾಮದಲ್ಲಿ ರೈತ ಮಲ್ಲೇಶ್ ಎಂಬವರು ಸಾಲ ಬಾದೆ ತಾಳದೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿ ಮಲ್ಲೇಶ್ (೪೭) ಎಂಬವರು ತನ್ನ ಜಮೀನಿನಲ್ಲಿ ಬೆಳೆ ಬೆಳೆಯಲು ಹಾಗೂ ಜಮೀನು ಅಭಿವೃದ್ಧಿಪಡಿಸಲು ತಾಲೂಕಿನ ತೊಳಲು ಗ್ರಾಮದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ ಸುಮಾರು ೮ ಲಕ್ಷ ಸಾಲ ಸೇರಿದಂತೆ ೨ ಲಕ್ಷ ರೂ. ಗಳನ್ನು ಕೈಸಾಲ ಮಾಡಲಾಗಿದ್ದು ಜಮೀನಿನಲ್ಲಿ ಹಾಕಲಾಗಿದ್ದ ಬೆಳೆಯ ಫಸಲು ಸರಿಯಾಗಿ ಬಾರದ ಕಾರಣ ಸಾಲಗಾರ ಬಾದೆ ತಾಳದೆ ತನ್ನ ಜಮೀನಿನಲ್ಲಿ ಬೆಳೆ ಬೆಳೆಯಲು ತಂದಿದ್ದ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಇವರು ಓರ್ವ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.