ಸಕಲೇಶಪುರ: ಪಟ್ಟಣದ ಹಳೆ ಸಂತೇವೇರಿ ಸಮೀಪ ವ್ಯಕ್ತಿಯೋರ್ವ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಗುರುವಾರ ಮುಂಜಾನೆ ನಡೆದಿದೆ.
ಪಟ್ಟಣದ ಕುಶಾಲನಗರ ಬಡಾವಣೆಯ ಜಯರಾಂ (52) ಮೃತಪಟ್ಟ ದುರ್ದೈವಿಯಾಗಿದ್ದಾರೆ. ಎತ್ತಿನ ಗಾಡಿಯಲ್ಲಿ ಹೋಗುವಾಗ ಅಕಸ್ಮಿಕವಾಗಿ ಬಿದ್ದು ಎತ್ತಿನಗಾಡಿ ಚಕ್ರಕ್ಕೆ ಸಿಲುಕಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ, ತಲೆಯ ಭಾಗಕ್ಕೆ ತೀವ್ರ ರೀತಿಯಲ್ಲಿ ಪೆಟ್ಟುಬಿದ್ದಿದೆ. ಸ್ಥಳಕ್ಕೆ ನಗರಠಾಣೆ ಪಿ.ಎಸ್.ಐ ಶಿವಶಂಕರ್ ಪರಿಶೀಲನೆ ನಡೆಸಿದರು.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.