ಹಾಸನ: ನಾಳೆ ನಡೆಯುವ ಚೆನ್ನಕೇಶವ ಸ್ವಾಮಿ ರಥೋತ್ಸವ ಸಂದರ್ಭದಲ್ಲಿ ರಥದ ಎದುರು ಕುರಾನ್ ಪಠಣಕ್ಕೆ ಅವಕಾಶ ನೀಡಬಾರದು, ಈ ಸಂಬಂಧ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಿಶ್ವ ಹಿಂದೂ ಪರಿಷತ್ ನ ರಕ್ಷೀತ್ ಭರದ್ವಾಜ್ ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಹಿಂದೂ ಧಾರ್ಮಿಕ ಸಂಪ್ರದಾಯದಂತೆ ರಥೋತ್ಸವ ಜರುಗಬೇಕು. ಈ ಸಂದರ್ಭದಲ್ಲಿ ಕುರಾನ್ ಪಠಣವನ್ನು ಮಾಡುವುದು ಸರಿಯಲ್ಲ. ದೇವಾಲಯದ ಮ್ಯಾನುಯಲ್‌ನಲ್ಲೂ ಸಹ ಕುರಾನ್ ಪಠಣದ ಬಗ್ಗೆ ಉಲ್ಲೇಖವಿಲ್ಲದೆ ಇದ್ದರೂ ದುರುದ್ದೇಶ ಪೂರ್ವಕವಾಗಿ ಕುರಾನ್ ಪಠಣದ ಆಚರಣೆಯನ್ನು ಸೇರಿಸಲಾಗಿದೆ ಎಂದು ದೂರಿದರು. ಕಳೆದ ಬಾರಿಯ ರಥೋತ್ಸವ ಸಂದರ್ಭದಲ್ಲಿಯೂ ವಿಶ್ವ ಹಿಂದೂ ಪರಿಷತ್ ಕುರಾನ್ ಪಠಣಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಈ ಬಾರಿಯೂ ಸಹ ನಮ್ಮ ವಿರೋಧವಿದ್ದು ರಥೋತ್ಸವ ಎದುರು ಕುರಾನ್ ಪಠಣ ಮಾಡಿದರೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವ ಹಿಂದೂ ಪರಿಷತ್ ನ ಅನೂಪ್, ಅಭಿಷೇಕ, ವಿಕಾಸ ಇದ್ದರು.