ಹಾಸನ: ಸಮುದಾಯದ ಸರ್ವತೋಮುಖ ಅಭಿವೃದ್ಧಿಯಾಗಬೇಕಾದರೆ ಮೊದಲು ಕೊರತೆಗಳ ಬಗ್ಗೆ ಪ್ರಶ್ನಿಸುವ ಮನೋಭಾವವನ್ನು ರೂಢಿಸಿಕೊಳ್ಳಬೇಕು. ಆಗ ಮಾತ್ರ ಧಾರ್ಮಿಕ ತಳಹದಿಯಿಂದ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಕುಣಿಗಲ್ ಅರೆಶಂಕರ ಮಠದ ಶ್ರೀ ಸಿದ್ದರಾಮ ಚೈತನ್ಯ ಸ್ವಾಮೀಜಿ ಹೇಳಿದರು.
ನಗರದ ಎನ್.ಸಿ.ಎನ್ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ಒಕ್ಕಲಿಗರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ರಾಜೇಶ ಗೌಡರವರ ನೇತೃತ್ವದಲ್ಲಿ ಆಯೋಜಿಸಿದ್ದ ಹಾಸನ ಜಿಲ್ಲಾ ಒಕ್ಕಲಿಗರ ವೇದಿಕೆಯ ಮೊದಲನೇ ವರ್ಷದ ವಾರ್ಷಿಕೋತ್ಸವ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ನೂರಾರು ಒಕ್ಕಲಿಗ ಸಂಘ ಸಂಸ್ಥೆ ಸ್ಥಾಪಿಸಿ, ಕಾರ್ಯ ನಿರ್ವಹಿಸುವ ಮುಖಂಡರು ಒಕ್ಕಲಿಗರನ್ನ ಒಂದು ಗೂಡಿಸುವ, ಅವರಿಗೆ ಸಿಗಬೇಕಾದ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ತಿಳಿಸಿದರು.
ಹಾಸನ ಜಿಲ್ಲಾ ಒಕ್ಕಲಿಗರ ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ರಾಜೇಶಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ೨೦೨೧ರಲ್ಲಿ ಪ್ರಾರಂಭವಾದ ಹಾಸನ ಜಿಲ್ಲಾ ಒಕ್ಕಲಿಗರ ವೇದಿಕೆಯನ್ನ ರಾಜ್ಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೊಂಡೊಯ್ಯಲು ಈಗಾಗಲೇ ಕೆಲವು ಆಲೋಚನೆಗಳನ್ನು ನಡೆಸಲಾಗಿದೆ ಎಂದರು.
ಇದೇ ವೇಳೆ ಮಿಳಿಯಮ್ಮ ಆಧ್ಯಾತ್ಮಿಕ ಕೇಂದ್ರ ಕತ್ರಿಗಟ್ಟ ಸಂಸ್ಥಾಪಕರಾದ ಚಂದ್ರಶೇಖರ ಗುರೂಜಿ, ರಾಜ್ಯ ಒಕ್ಕಲಿಗರ ಸಂಘ ನಿರ್ದೇಶಕರಾದ ಸುಮುಖ ರಘು, ಕೃಷಿ ಮಿತ್ರ ರೈತ ಸಮೂಹ ಸಂಸ್ಥಾಪಕ ಸಂಚಾಲಕರು ಹಾಗೂ ಒಕ್ಕಲಿಗರ ಅಭಿವೃದ್ಧಿ ನಿಗಮ ಫೌಂಡೇಷನ್ ರಾಜ್ಯ ಸಂಚಾಲಕರಾದ ರೋಹನ್‌ಗೌಡ, ಹಲೋ ಹಾಸನ ಪತ್ರಿಕೆಯ ಸಂಪಾದಕರಾದ ರವಿನಾಕಲಗೂಡು, ಕೆಂಪೇಗೌಡ ಪ್ರಾಧಿಕಾರದ ನಿರ್ದೇಶಕರು ಹಾಗೂ ಸಮಾಜ ಸೇವಕ ಡಾ. ಹೆಚ್.ಎಂ ಕೃಷ್ಣಮೂರ್ತಿ ಮಾತನಾಡಿದರು.
ಕೆಂಪೇಗೌಡ ಪ್ರಾಧಿಕಾರದ ನಿರ್ದೇಶಕರು ಹಾಗೂ ಸಮಾಜ ಸೇವಕ ಡಾ. ಹೆಚ್.ಎಂ ಕೃಷ್ಣಮೂರ್ತಿ ಅವರ ಧರ್ಮಪತ್ನಿ ಪುಷ್ಪ, ಕಸಾಪ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಹಾಸನ ಒಕ್ಕಲಿಗರ ವೇದಿಕೆ ಮುಖಂಡ ವಿರಾಜೇಗೌಡ, ಹಾಸನ ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷರು ಹಾಗೂ ನಾಗರಿಕ ಹಿತ ರಕ್ಷಕ ವೇದಿಕೆ ಸಂಸ್ಥಾಪಕ ಕಾರ್ಯದರ್ಶಿ ಬಿ.ಕೆ .ಮಂಜುನಾಥ್, ರಾಜಗಂಗ ಗ್ರೂಪ್ಸ್ ನ ಮಾಲೀಕ ತಾರಾನಾಥ್, ಬೆನಕ ಇಂಜಿನಿಯರ್ಸ್ ಮಾಲೀಕ ಶರತ್, ಕೆ.ಟಿ. ಗಿರೀಶ್ ಕೆಂಚೆಟ್ಟಳ್ಳಿ, ಕೆ.ಟಿ.ಸಣ್ಣ ಸ್ವಾಮಿ, ಶಾಂತಿಗ್ರಾಮ ಗ್ರಾ.ಪಂ. ಮಾಜಿ ಅಧ್ಯಕ್ಷೆ ಪ್ರತಿಮಾ ಯೋಗೇಶ್, ಬೆಂಗಳೂರಿನ ಬಸವೇಶ್ವರ ನಗರ ರಾಜು, ವಿದಾತ ಡಾಬಾ ಮಾಲೀಕ ದಿನೇಶ್, ಒಕ್ಕಲಿಗರ ವೇದಿಕೆಯ ಪದಾಧಿಕಾರಿಗಳು, ಇನ್ನಿತರರು ಉಪಸ್ಥಿತರಿದ್ದರು.