ಬೇಲೂರು: ನಮ್ಮ ಮನೆಯಲ್ಲಿ ಕಾಂಗ್ರೆಸ್‌ಗೆ ಮತವಿಲ್ಲ ಎಂಬ ಕರಪತ್ರ ಭಜರಂಗದಳದ ಹಾಗೂ ಹನುಮಾನ್ ಭಕ್ತರು ಅಂಟಿಸಿದ್ದಾರೆ. ಭಜರಂಗದಳ ಹಾಗೂ ಶ್ರೀರಾಮಸೇನೆ ವಿರುದ್ಧ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ನಿಷೇದಿಸುವ ಬಗ್ಗೆ ಹಾಗೂ ಶ್ರೀ ಹನುಮಾನ್ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ಪಕ್ಷಕ್ಕೆ ನಮ್ಮ ಮನೆಯಲ್ಲಿ ಮತ ಕೇಳುವ ಹಕ್ಕಿಲ್ಲ ಎಂಬ ಭಿತ್ತಿಪತ್ರ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಲಕ್ಷ್ಮೀಪುರ ಬಡಾವಣೆಯಲ್ಲಿ ಭಿತ್ತಿ ಪತ್ರ ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಹನುಮಭಕ್ತರು ಹಾಗೂ ಭಜರಂಗದಳ ನಮ್ಮ ಮನೆಯಲ್ಲಿ ನಿಮಗೆ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಮತ ಕೇಳುವ ಹಕ್ಕಿಲ್ಲ ನೀವು ನಮ್ಮ ಮನೆಗೆ ಬರಬೇಡಿ ಎಂಬ ಕರಪತ್ರ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.