ಬೇಲೂರು: ಮಾರ್ಚ್ ೧೫ರಂದು ಸ್ವಾಭಿಮಾನಿ ಮುಸ್ಲಿಂ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಾಮಾಜಿಕ ಹೋರಾಟಗಾರ ನೂರು ಅಹ್ಮದ್ ಸುದ್ದಿಗೋಷ್ಠಿ ಅಲ್ಲಿ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸ್ವಾತಂತ್ರ ಬಂದು ೭೫ ವರ್ಷ ಕಳೆದರೂ ನಮ್ಮನಾಳುವ ರಾಜಕೀಯ ಪಕ್ಷಗಳ ಮುಖಂಡರುಗಳು ಸಂದರ್ಭದಲ್ಲಿ ತಕ್ಕಂತೆ ಕೇವಲ ಮತ ಹಾಕಲು ಬಳಸಿಕೊಳ್ಳುತ್ತಾರೆ. ೩ ಪಕ್ಷಗಳಲ್ಲಿರುವ ನಮ್ಮ ಸಮುದಾಯದ ಮುಖಂಡರುಗಳು ಕೇವಲ ಅವರ ಸ್ವಾರ್ಥಕ್ಕೆ ನಮ್ಮ ಜನಾಂಗವನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಸಮುದಾಯದ ಜನಪ್ರತಿನಿಧಿಗಳು ಪಟ್ಟಣದ ಅಭಿವೃದ್ಧಿಗೆ ಯಾರು ಸಹ ಹೆಚ್ಚಿನ ಒತ್ತು ನೀಡುತ್ತಿಲ್ಲ. ಚುನಾವಣೆ ಸಂದರ್ಭದಲ್ಲಿ ನಾವೆಲ್ಲ ಒಂದು ಎಂದು ನಮ್ಮನ್ನು ದಾರಿ ತಪ್ಪಿಸುತ್ತಿದ್ದಾರೆ. ಈಗಾಗಲೇ ನಮ್ಮ ಸಮುದಾಯವನ್ನು ಶೈಕ್ಷಣಿಕವಾಗಿ, ರಾಜಕೀಯವಾಗಿ, ನಿರುದ್ಯೋಗ ಸೇರಿದಂತೆ ಹತ್ತು ಹಲವಾರು ಸಮಸ್ಯೆಗಳಿಗೆ ತಳ್ಳಿದ್ದಾರೆ. ಅದಲ್ಲದೆ ತಾಲೂಕಿನಾದ್ಯಂತ ಮುಸ್ಲಿಂ ಸಮುದಾಯಕ್ಕೆ ಸೇರಿದ ಒಂದು ಸಮುದಾಯ ಭವನವನ್ನಾಗಲಿ, ಪಟ್ಟಣದಲ್ಲಿರುವ ಮಸೀದಿ, ದರ್ಗಾಗಳಲ್ಲಿ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಪಟ್ಟಣದ ಮುಸ್ಲಿಂ ಬೀದಿಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ. ಹೀಗೆ ಮತ್ತು ಹಲವಾರು ಧೋರಣೆಗಳನ್ನು ಖಂಡಿಸಿ ಮಾರ್ಚ್ ೧೫ರಂದು ಸ್ವಾಭಿಮಾನಿ ಮುಸ್ಲಿಂ ಬೃಹತ್ ಸಮಾವೇಶವನ್ನು ಇಲ್ಲಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ.
ನಮ್ಮ ಸಮುದಾಯ ಬಾಂಧವರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ನಮ್ಮ ಹಕ್ಕುಗಳಿಗಾಗಿ ಹೋರಾಡಬೇಕಾಗಿದೆ. ನಮ್ಮ ಸ್ಥಳೀಯ ಶಾಸಕ ಕೆ ಎಸ್ ಲಿಂಗೇಶ್ ಅವರು ಕೇವಲ ಎಲ್ಲಾ ಭಾಷಣಗಳಲ್ಲಿ ಬೇಲೂರಿನ ಅಭಿವೃದ್ಧಿಗೆ ೧,೮೦೦ ಕೋಟಿ ಅನುದಾನ ತಂದಿದ್ದೇನೆ ಎಂದು ಹೇಳುತ್ತಾರೆ. ಆದರೆ ಒಂದು ಬಾರಿ ಪಟ್ಟಣದಲ್ಲಿರುವ ನಮ್ಮ ಸಮುದಾಯದ ಬೀದಿಗಳಿಗೆ ಬಂದು ಗಮನಿಸಿದರೆ ಅವರಿಗೆ ತಿಳಿಯುತ್ತದೆ. ಅದಲ್ಲದೆ ಯಾರೋ ಒಬ್ಬರು ಮಾಡುವ ತಪ್ಪಿಗೆ ಎಲ್ಲರನ್ನೂ ದೂರುವುದು ಸರಿಯಲ್ಲ. ನಾವು ನಮಗಾಗಿ ಇದೂವರೆಗೆ ಯಾವುದೇ ಹೋರಾಟಗಳು ಪ್ರತಿಭಟನೆಗಳನ್ನು ನಡೆಸಿಲ್ಲ. ಆದ್ದರಿಂದ ಎಲ್ಲಾ ವಿಚಾರದಲ್ಲೂ ನಮ್ಮನ್ನು ಕಡೆಗಣಿಸಲಾಗಿದೆ. ಎಲ್ಲಾ ನನ್ನ ಮುಸಲ್ಮಾನ ಬಾಂಧವರು ತಪ್ಪದೆ ಸಮಾವೇಶಕ್ಕೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು ಎಂದು ಕರೆ ನೀಡಿದರು.
ಇದೇ ಸಂದರ್ಭ ಜಿಲ್ಲಾ ವಕ್ಕು ಬೋರ್ಡ್ ಉಪಾಧ್ಯಕ್ಷ ಸುಲೇಮಾನ್ ಮಾತನಾಡಿ ಮುಸಲ್ಮಾನ ಜನಾಂಗದವರು ಎಂದಿಗೂ ಬೀದಿಗೆ ಇಳಿದು ಹೋರಾಟ ಮಾಡಿದವರಲ್ಲ. ರಾಜಕೀಯ ಸೇರಿದಂತೆ ನಮ್ಮ ಸಮುದಾಯದ ಮಹಾನಿಯಾರುಗಳಿಗೆ ಕಡೆಗಣಿಸಲಾಗಿದೆ. ಇದಕ್ಕೆ ನಾವೆಲ್ಲ ಒಗ್ಗಟ್ಟಿನಿಂದ ಹೊರಡಬೇಕಾಗಿದೆ. ಇಲ್ಲಿನ ಕೆಲವು ಮುಖಂಡರು ನಮ್ಮನ್ನು ಬಳಸಿಕೊಂಡು ಅವರ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಾರೆ. ಪ್ರತಿಯೊಬ್ಬರು ಜಾಗೃತರಾಗಿ ನಿಮ್ಮ ಹಕ್ಕುಗಳನ್ನು ನೀವು ಪಡೆಯಲು ಮುಂದಾಗಬೇಕು ಎಂದರು.
ಈ ಸಂದರ್ಭದಲ್ಲಿ ಸಾಮಾಜಿಕ ಸೇವಾ ಟ್ರಸ್ಟ್ ಸದಸ್ಯ ಮುಜಮಿಲ್ ಪಾಷ, ಬಂಟೆನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಇಸ್ಮಾಯಿಲ್ ಹಾಜರಿದ್ದರು.