ಸಕಲೇಶಪುರ: ಅಕ್ರಮ ಬಾಂಗ್ಲಾದೇಶಿ ಮುಸ್ಲಿಮರು ಅಸ್ಸಾಂ ಮೂಲದವರು ಎಂದು ನಕಲಿ ದಾಖಲೆ ಸೃಷ್ಟಿಸಿ ಸಕಲೇಶಪುರದಲ್ಲಿ ನೆಲೆ ನಿಂತಿರುವರಿಗೆ ೨೦೨೩ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಮಾಡಲು ಅವಕಾಶ ನೀಡಬಾರದು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಬಜರಂಗದಳ ಕಾರ್ಯಕರ್ತರು ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಕಲೇಶಪುರ ಕಾಫಿ ತೋಟದಲ್ಲಿ ಅಕ್ರಮವಾಗಿ ಕೂಲಿ ಕಾರ್ಮಿಕರ ಸೋಗಿನಲ್ಲಿ ಇರುವ ಅಕ್ರಮ ಒಳ ನುಸುಳುಕೋರರು ಬಾಂಗ್ಲಾದೇಶದವರಾಗಿದ್ದು ಇವರು ನಕಲಿ ಅಸ್ಸಾಂ ರಾಜ್ಯದ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿ ಹೊಂದಿದ್ದಾರೆ. ಈ ಅಕ್ರಮ ನುಸುಳುಕೋರರು ಕಡಿಮೆ ಕೂಲಿಗೆ ಕೆಲಸ ಮಾಡುತ್ತಾರೆ ಎಂದು ತೋಟದ ಮಾಲಿಕರು ಏಜೆಂಟ್’ಗಳ ಮುಖಾಂತರ ಅಕ್ರಮವಾಗಿ ಕಾಪಿ ಎಸ್ಟೇಟ್‌ನಲ್ಲಿ ನೆಲೆ ನಿಲ್ಲಿಸಿದ್ದಾರೆ. ಎಂದು ವಾಸ ಇರುವ ದೃಡೀಕರಣ ಪತ್ರ ನೀಡಿ ಚುನಾವಣಾ ಗುರುತಿನ ಚೀಟಿ ಮಾಡಿ ಕೊಡಿಸುತ್ತಿರುವ ವ್ಯವಸ್ಥಿತ ಜಾಲ ಇದರ ಹಿಂದೆ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ಅವರು ಅಕ್ರಮ ಬಾಂಗ್ಲಾ ನುಸುಳುಕೋರರು ನಮ್ಮ ರಾಜ್ಯದ ಚುನಾವಣಾ ಗುರುತಿನ ಚೀಟಿ ಪಡೆಯುವ ಸಂಭವವಿದ್ದು, ಈ ಬಗ್ಗೆ ಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು.
ದೇಶದ ಆಂತರಿಕ ಭದ್ರತೆಗೆ ಮಾರಕವಾಗಿರುವ ಈ ಬಾಂಗ್ಲಾದೇಶಿ ಮುಸ್ಲಿಮರು ಇಂದು ಸಕಲೇಶಪುರದಲ್ಲಿನ ಕಾಪಿ ಎಸ್ಟೇಟ್‌ಗಳಲ್ಲಿ ನೆಲೆ ನಿಂತಿದ್ದು ಸರಿ ಸುಮಾರು ೪ ಸಾವಿರಕ್ಕೂ ಹೆಚ್ಚು ನುಸುಳುಕೋರರು ಇರುವ ಸಂಭವವಿದೆ. ರಾಜ್ಯದಲ್ಲಿ ನಿಷೇಧವಿರುವ ಅಕ್ರಮ ಗೋಹತ್ಯೆ ಹಾಗೂ ಗೋಮಾಂಸ ಮಾರಾಟದಲ್ಲಿ ಇತ್ತೀಚಿನ ದಿನಗಳಲ್ಲಿ ಈ ಅಕ್ರಮ ಬಾಂಗ್ಲಾ ನುಸುಳುಕೋರರೇ ಬಹುತೇಕರು ಕಾಪಿ ಎಸ್ಟೇಟ್ ನ ನಿರ್ಜನ ಪ್ರದೇಶದಲ್ಲಿ ಸ್ಥಳೀಯರ ಗೋವುಗಳನ್ನು ಕದ್ದು ತಂದು ಕಟಾವು ಮಾಡಿ ಮಾಂಸ ಮಾರಾಟ ಮಾಡುತ್ತಿರುವ ವ್ಯವಸ್ಥಿತ ಜಾಲದಲ್ಲಿ ಇದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ನ ರಾಜ್ಯ ಸಮಿತಿ ಸದಸ್ಯ ರಘು ಸಕಲೇಶಪುರ ಸೇರಿದಂತೆ ಭಜರಂಗದಳ ಹಾಸನ ಜಿಲ್ಲೆಯ ಸಹಸಂಯೋಜಕ್ ಕೌಶಿಕ್ ಹೆಚ್.ಎಂ, ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿ ಮಂಜುನಾಥ, ಶಿವು ಜಿಪ್ಪಿ, ಮನು, ಲೋಕೇಶ್ ಬಾಳೆಗದ್ದೆ, ರವಿ ಹೆಬ್ಬಸಾಲೆ, ವಿನೋದ್ ಇದ್ದರು.