ಹಾಸನ: ಮಂಡ್ಯ ಜಿಲ್ಲೆಯ ನಿವಾಸಿ ಇದ್ರೀಸ್ ಪಾಷ ಕುಟುಂಬಕ್ಕೆ ಕೂಡಲೇ ಪರಿಹಾರ ಮತ್ತು ಉಚಿತವಾಗಿ ಮಕ್ಕಳ ಉನ್ನತ ಶಿಕ್ಷಣಕ್ಕೆ ಸರಕಾರವು ಅನುವು ಮಾಡಿಕೊಡುವುದಕ್ಕೆ, ಘೋಷಿಸಲು ಆದೇಶ ಮಾಡುವಂತೆ ಮುಸ್ಲಿಂ ಮುಖಂಡರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಮಧ್ಯರಾತ್ರಿ ರಾಷ್ಟ್ರ ರಕ್ಷಣಾಪಡೆ ಸಂಘಟನೆಯ ಮುಖ್ಯಸ್ಥ, ಕ್ರಿಮಿನಲ್ ಹಿನ್ನೆಲೆಯುಳ್ಳ ಸ್ವಯಂ ಘೋಷಿತ ಗೋರಕ್ಷಕ, ಸಮಾಜಘಾತುಕ ವ್ಯಕ್ತಿ ಪುನೀತ್ ಕೆರೆಹಳ್ಳಿ ಮತ್ತು ಸಹಚರರು ಸೇರಿ, ಮಂಡ್ಯ ಮೂಲಕ ಇದ್ರೀಸ್ ಪಾಷರವರು ಗೋ-ಸಾಗಾಣಿ ಮಾಡುತ್ತಿದ್ದಾರೆ ಎಂದು ಏಕೈಕ ಕಾರಣಕ್ಕೆ ಇವರ ವಾಹನ ತಡೆದು ಇವರ ಮೇಲೆ ಮಾರಣಾಂತಿ ಹಲ್ಲೆ ನಡೆಸಿ ಹತ್ಯೆ ಮಾಡಿರುತ್ತಾರೆ. ಲೇಟ್ ಇದೀಸ್ ಪಾಷಾ ಕೂಲಿ ಕಾರ್ಮಿಕ, ವಾಹನ ಚಾಲಕ, ಬಡಪಾಯಿ. ಇವರಿಗೆ ಹೆಂಡತಿ ಮತ್ತು ಇಬ್ಬರು ಸಣ್ಣ ಮಕ್ಕಳಿದ್ದಾರೆ. ಹೆಂಡತಿ ವಿಧವೆ, ಮಕ್ಕಳು ಅನಾಥರಾಗಿದ್ದಾರೆ ಎಂದರು.
ಈ ಬಗ್ಗೆ ಗಮನಹರಿಸಿ ರಾಜ್ಯ ಸರ್ಕಾರ ಇದೀಸ್ ಪಾಷ ಕುಟುಂಬಕ್ಕೆ ಐವತ್ತು ಲಕ್ಷ ಪರಿಹಾರ ನೀಡಿ, ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ಮತ್ತು ಮಕ್ಕಳಿಗೆ ಕೇಂದ್ರಿಯ ವಿದ್ಯಾಲಯಗಳಲ್ಲಿ ಉಚಿತವಾಗಿ ಉನ್ನತ ವಿದ್ಯಾಬ್ಯಾಸಕ್ಕಾಗಿ ಸರ್ಕಾರ ಅನುವು ಮಾಡಿಕೊಡಲು ತಾವು ರಾಜ್ಯ ಸರ್ಕಾರಕ್ಕೆ ಸೂಚಿಸಬೇಕೆಂದು ಕೋರಿದರು. ಈ ಬಗ್ಗೆ ನಮ್ಮ ನಿಯೋಗ ಅಮೀತ್ ಶಾ ಅವರನ್ನ ಭೇಟಿ ಮಾಡಿ ನೈಜ ಪರಿಸ್ಥಿತಿ ಗಮನಕ್ಕೆ ತರಲಾಗುವುದು ಎಂದು ಹೇಳಿದರು.
ಈ ವೇಳೆ ಎಎಪಿ ಪಕ್ಷದ ಮುಖಂಡ ಅಕ್ಮಲ್ ಜಾವೀದ್, ಮುಸ್ಲಿಂ ಮುಖಂಡರಾದ ಸೈಯದ್ ಅಕ್ಬರ್, ಅಮ್ಜಾದ್ ಖಾನ್, ಸಾಮಾಜಿಕ ಕಾರ್ಯಕರ್ತ ಸಮೀರ್ ಅಹಮದ್, ಭೀಮ್ ಆರ್ಮಿ ಮುಖಂಡ ರಿಯಾಜ್ ಪಾಷ, ಟಿ.ಎ. ದಸ್ತಗೇರ್, ಹಬೀಬ್, ಅಬ್ದೂಲ್ ಪಾಷಾ ಇತರರು ಉಪಸ್ಥಿತರಿದ್ದರು.