ಸಕಲೇಶಪುರ: ಮಲೆನಾಡು ಭಾಗದಲ್ಲಿ ಕಾಡಾನೆ ದಾಳಿ ಇಬ್ಬರಿಗೆ ಗಂಭೀರ ಗಾಯಗೊಂಡಿರುವ ಘಟನೆ ಗುಳಗಳಲೆ ಹಾಗೂ ಹೆಬ್ಬನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಳಗಳಲೆ ಗ್ರಾಮದ ಕುರ್ಚಿ ಕಾಫಿ ಎಸ್ಟೆಟ್ ರೈಟರ್ ಇನಾಯತ್ (45) ಮೇಲೆ ದಾಳಿ ನಡೆಸಿದ ಕಾಡಾನೆ, ನಂತರ ಹೆಬ್ಬನಹಳ್ಳಿ ಗ್ರಾಮದಲ್ಲಿ ಅಸ್ಸಾಂ ಮೂಲದ ಕಾರ್ಮಿಕ ಹಬೀದ್ (26) ಮೇಲೆ ಏಕಾಏಕಿ ದಾಳಿ ನಡೆಸಿದೆ. ಹಬೀದ್ ಮತ್ತು ಇನಾಯತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಇಬ್ಬರು ಪಾರಾಗಿದ್ದಾರೆ.
ಬೀಟಮ್ಮ ಎಂಬ ಹೆಸರಿನ ಗ್ರೂಪ್‌ನಲ್ಲಿದ್ದ ಒಂಟಿ ಸಲಗ ಗುಂಪಿನಿಂದ ಬೇರ್ಪಟ್ಟು ಸಿಕ್ಕ-ಸಿಕ್ಕವರ ಮೇಲೆ ದಾಳಿ ನಡೆಸುತ್ತಿದೆ. ಕಾಡಾನೆ ಉಪಟಳದಿಂದ ಗ್ರಾಮಸ್ಥರು ಭಯಬೀತಗೊಂಡಿದ್ದಾರೆ. ಗ್ರಾಮಸ್ಥರು ಎಚ್ಚರಿಕೆಯಿಂದ ಓಡಾಡುವಂತೆ ಅರಣ್ಯ ಇಲಾಖೆ ಸಿಬ್ಬಂದಿ ಮನವಿ ಮಾಡಿದ್ದಾರೆ. ದಿನ-ದಿನಕ್ಕೆ ಕಾಡಾನೆ ತೊಂದರೆ ಹೆಚ್ಚುತ್ತಿದ್ದು, ಕೂಡಲೆ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಂಡು ಹಿಡಿಯುವಂತೆ ಮಲೆನಾಡು ಭಾಗದ ಜನರ ಆಗ್ರಹಿಸಿದ್ದಾರೆ.