ಹಾಸನ: ಕ.ವಿ.ಪ್ರ.ನಿ.ನಿ ಯಿಂದ ಮಾ.೧೫ ರಂದು ೬೬/೧೧ಕೆ.ವಿ ಸಂತೆಪೇಟೆ ಹಾಸನ ವಿ.ವಿ ಕೇಂದ್ರದಲ್ಲಿ ತುರ್ತು ನಿರ್ವಹಣಾ ಕೆಲಸವನ್ನು ಹಮ್ಮಿಕೊಂಡಿರುವುದರಿಂದ ಅಂದು ಬೆಳಗ್ಗೆ ೧೦ ಗಂಟೆಯಿಂದ ಸಂಜೆ ೦೬ ಗಂಟೆಯವರೆಗೆ ೬೬/೧೧ಕೆ.ವಿ ಸಂತೆಪೇಟೆ ಹಾಸನ ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಸಂತೆಪೇಟೆ ಸರ್ಕಲ್, ಗಾಂಧಿಬಜಾರ್, ಶ್ರೀನಗರ, ಎನ್.ಆರ್ ವೃತ್ತ ಸುತ್ತಮುತ್ತ, ಹಾಸನಾಂಬ ವೃತ್ತ, ಹುಣಸಿನಕೆರೆ, ಮೈಕ್ರೊವೇವ್, ಬಿಟ್ಟಗೋಡನಹಳ್ಳಿ, ಮೆಡಿಕಲ್ ಕಾಲೇಜು, ಡಿ.ಸಿ ಕಛೇರಿ, ಎಸ್.ಪಿ ಕಛೇರಿ, ಸುವರ್ಣ, ದೇವೆಗೌಡನಗರ, ಹನುಮಂತಪುರ, ಅಗಿಲೆ, ಎರೆಬೆರೆ ಕಾವಲು, ಚನ್ನಪಟ್ಟಣ, ಹೊಸಕೊಪ್ಪಲು, ದೇವಮ್ಮ ಬಡಾವಣೆ, ಮಾರ್ಗನಹಳ್ಳಿ, ತಣ್ಣೀರುಹಳ್ಳ, ವಿಜಯನಗರ, ಬೈಲಹಳ್ಳಿ, ಹೊಯ್ಸಳ ರೆಸಾರ್ಟ್ ಸುತ್ತ ಮುತ್ತ, ವಾಟರ್ ಸಪ್ಲೈ, ಕೆ.ಹೆಚ್.ಬಿ. ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಸ್ಥಾವರಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
ಮಾ. ೧೫ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ

Photo Credit :
Bharath
MANY DROPS MAKE AN OCEAN
Support NewsKarnataka's quality independent journalism with a small contribution.