ಕೊಣನೂರು: ರೈತರುಗಳಿಗೆ ಬಾಕಿ ಬರಬೇಕಾದ ಪರಿಹಾರ ಹಣದ ಚೆಕ್ಕನ್ನು ಕೊಟ್ಟು ಕಾಮಗಾರಿ ನಡೆಸುವಂತೆ ಹೋಬಳಿಯ ಸಿದ್ದಾಪುರದಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯಿಂದ ಹೆದ್ದಾರಿ ರಸ್ತೆ ಕಾಮಗಾರಿಯನ್ನು ತಡೆದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸುವರ್ಣ ಕರ್ನಾಟಕ ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಡಾ. ಎಸ್ ರಾಘವೇಂದ್ರ ಗೌಡ ಅರಕಲಗೂಡು ತಾಲೂಕಿನ ಕೆಶಿಪ್-3 ಅಧಿಕಾರಿಗಳಿಂದ ರೈತರಿಗೆ ಸಾಕಷ್ಟು ಮೋಸವಾಗಿದ್ದು, ಈ ವಿಚಾರವಾಗಿ ರೈತರು ನಮಗೆ ತಿಳಿಸಿದಾಗ ಸುಮಾರು ಎರಡು ವರ್ಷಗಳಿಂದ ಹೋರಾಟ ನಡೆಸಿದ ಪ್ರತಿಫಲವಾಗಿ ಹೆಚ್ಚುವರಿ ಪರಿಹಾರದ ಹಣ ಬಂದು ಒಂದು ವರ್ಷವಾದರೂ ಅಧಿಕಾರಿಗಳ ಲೋಪ ದೋಷಗಳಿಂದ ರೈತರಿಗೆ ಬರಬೇಕಾಗಿದ್ದ ಹೆಚ್ಚುವರಿ ಪರಿಹಾರದ ಮೊತ್ತ ಇದುವರೆಗೂ ಬರದೆ ರೈತರು ಕಂಗಲಾಗಿದ್ದಾರೆ.
ಈ ದಿನ ಕಾಮಗಾರಿಯನ್ನು ನಿಲ್ಲಿಸಿ ರೈತರಿಗೆ ಹೆಚ್ಚುವರಿ ಪರಿಹಾರದ ಹಣವನ್ನು ಕೊಟ್ಟು ಕಾಮಗಾರಿ ನಡೆಸಲು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿ, ಪರಿಹಾರದ ಹಣದ ವಿಚಾರದಲ್ಲಿ ಅಧಿಕಾರಿಗಳು ಮಾಡುತ್ತಿರುವ ಲೋಪದೋಷ, ಮೋಸಗಳನ್ನು ನಿಲ್ಲಿಸಬೇಕು. ಮೋಸ ಮಾಡುತ್ತಿರುವ ಅಧಿಕಾರಿಗಳನ್ನು ಅಮಾನತ್ತುಗೊಳಿಸಬೇಕು ಹಾಗೂ ಪರಿಹಾರದ ಹಣವನ್ನು ಶೀಘ್ರದಲ್ಲಿ ಕೊಡಬೇಕು. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸದಿದ್ದರೆ ಮುಂದಿನ ದಿನಗಳಲ್ಲಿ ಸುವರ್ಣ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಇನ್ನೊಂದು ವಾರದೊಳಗೆ ರೈತರಿಗೆ ಹೆಚ್ಚುವರಿ ಪರಿಹಾರ ಹಣದ ಚೆಕ್ಕನ್ನು ಕೊಡಿಸಲಾಗುವುದು ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೇನೆಯ ರಾಜ್ಯಾಧ್ಯಕ್ಷ ಡಾ. ಎಸ್. ರಾಘವೇಂದ್ರಗೌಡ, ನೊಂದ ರೈತರುಗಳಾದ ರಾಮ ಕೃಷ್ಣೇಗೌಡ, ಅಣ್ಣಪ್ಪಗೌಡ, ಬಾಬ ನಗರ ಸಣ್ಣಸ್ವಾಮಿ, ರಾಮಮ್ಮ ಮತ್ತು ರಸ್ತೆ ಕಾಮಗಾರಿ ನಡೆಸುತ್ತಿರುವ ಕೆಎನ್‌ಆರ್ ಸಂಸ್ಥೆಯ ಕಿರಿಯ ಎಂಜಿನಿಯರ್ ದುಶ್ಯಂತ್, ಉಪ ಪ್ರಾಜೆಕ್ಟ್ ಮ್ಯಾನೇಜರ್ ಗಳಾದ ಮುರಳಿ, ಭಾಸ್ಕರಯ್ಯ ಇದ್ದರು.