ಬೇಲೂರು: ತಾಲೂಕಿನ ಅರೇಹಳ್ಳಿ ಹೋಬಳಿಯಲ್ಲಿ ವಿದ್ಯುತ್ ಕೇಂದ್ರ ಇದ್ದು ಬಿಕ್ಕೋಡು ಅರೇಹಳ್ಳಿ ಹೋಬಳಿ ವ್ಯಾಪ್ತಿಗೆ ಸಂಬಂಧಪಟ್ಟ ಅಧಿಕಾರಿ ಆಗಿರುವ ರೇವಣ್ಣ ಏನು ಕೆಲಸ ನಿರ್ವಹಿಸುತ್ತಿದ್ದಾರೆ ತಿಳಿಯದು.
ಕನಿಷ್ಠ ದಿನಕ್ಕೆ ಹಗಲು ಒಂದು ವ್ಯಾಪ್ತಿಯಲ್ಲಿ 25 ರಿಂದ 30 ಬಾರಿ ವಿದ್ಯುತ್ ತೆಗೆಯುವುದು, ಹಾಕುವುದು ಮಾಡುತ್ತಾರೆ. ಹೀಗಾದರೆ ರೈತರು ಬೆಳೆಗಳಿಗೆ, ಕಾಫಿ ತೋಟಕ್ಕೆ ನೀರನ್ನು ಹಾಯಿಸಲು ಹೇಗೆ ಸಾಧ್ಯ? ಒಂದು ದಿನ ಅಥವಾ ಎರಡು ದಿನ ಸಮಸ್ಯೆ ಆದರೆ ಪರವಾಗಿಲ್ಲ. ಆದರೆ ಬಿಕ್ಕೋಡು ಅರೇಹಳ್ಳಿ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ವಿದ್ಯುತ್ ಸಮಸ್ಯೆ ಸರಿಪಡಿಸಲಾಗದ ಅಧಿಕಾರಿಗಳು, ವಿದ್ಯುತ್ ಇಲ್ಲವೆಂದು ಲೈನ್ ಮ್ಯಾನ್ ಗಳಿಗೆ ವಿಷಯ ತಿಳಿಸಿದರೆ ಅಲ್ಲಿ ಜಂಪ್ ಹೋಗಿದೆ, ಇಲ್ಲಿ ಜಂಪ್ ಹೋಗಿದೆ ಎಂದು ಉತ್ತರ ನೀಡುತ್ತಾರೆ ಮತ್ತು ಲೋಡ್ ಸೆಡ್ಡಿಂಗ್ ಇದೆ ಎಂದು ಕಾಗಕ್ಕ ಗೂಬಕ್ಕನ ಕಥೆ ಹೇಳಲು ಶುರು ಮಾಡಿದ್ದಾರೆ. ಈ ರೀತಿ ಆದರೆ ರೈತರ ಬೆಳೆದ ಬೆಳೆಗಳು ಬಿಸಿಲಿನ ತಾಪಕ್ಕೆ ಸುಟ್ಟು ಕರಕಾಲಗುತ್ತಿವೆ. ಇವುಗಳು ಯಾವುದು ತಿಳಿಯದಂತೆ ವರ್ತಿಸುತ್ತಿರುವ ಕೆಇಬಿ ಅಧಿಕಾರಿಗಳು ಈ ಸಮಸ್ಯೆ ಬಗೆಹರಿಸಲು ಆಗದಿದ್ದರೆ ಬೇರಡೆ ವರ್ಗಾವಣೆ ತೆಗೆದುಕೊಂಡು ಹೋಗಬೇಕು ಇಲ್ಲದಿದ್ದಲ್ಲಿ ರೈತರಿಗೆ ಸರಿಯಾಗಿ ವಿದ್ಯುತ್ ಅನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ
ಉದಾಹರಣೆ ಅಂಕಿಹಳ್ಳಿ (ಶಾಂತನಹಳ್ಳಿ) ಟ್ರಾನ್ಸ್ಫರ್ ಪೆಟ್ಟಿಗೆ ಸುಟ್ಟು ಹೋಗಿದೆ. ಹಲವು ಬಾರಿ ರಿಪೇರಿ ಮಾಡಿಸಲಾಗಿದೆ ದಿನಕ್ಕೆ 2ರಿಂದ 3 ಬಾರಿ ಜಂಪ್ ಹೋಗುತ್ತಿರುತ್ತದೆ. ಇದು ಯಾವುದನ್ನು ಸರಿಪಡಿಸದಿರುವ ಅಧಿಕಾರಿಗಳು ಈ ಭಾಗದ ರೈತರು ಹಿಡಿ ಶಾಪ ಹಾಕುತ್ತಿದ್ದಾರೆ. ಈ ಬಾರಿ ಸರಿಯಾಗಿ ವಿದ್ಯುತ್ ನೀಡದೆ ಕಾಫಿ ಗಿಡಗಳಿಗೆ ನೀರು ಹಾಯಿಸಲು ಆಗದೆ ಕಾಫಿ ತೋಟದ ಮಾಲೀಕರು ಕಾಫಿ ಗಿಡಗಳು ಸುಟ್ಟು ಹೋದ ಕಾರಣ ಕೆಇಬಿ ಅಧಿಕಾರಿಗಳಿಗೆ ಧಿಕ್ಕಾರ ಹಾಕುತ್ತಾ, ಸಮಸ್ಯೆ ಯಾವಾಗ ಬಗೆಹರಿಸುತ್ತಾರೆ ತಿಳಿಯದು ಎಂದು ಪ್ರಶ್ನಿಸುತ್ತಿದ್ದಾರೆ. ಅತಿ ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸದಿದ್ದರೆ ಇನ್ನು ಒಂದು ವಾರದೊಳಗೆ ಅರೇಹಳ್ಳಿ ವಿದ್ಯುತ್ ಕೇಂದ್ರದ ಮುಂದೆ ಧರಣಿ ಕೂರಲಾಗುವುದು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.