News Karnataka
ಸಿಟಿಜನ್ ಕಾರ್ನರ್

ವೇದಾವತಿ ನ್ಯಾಯಬೆಲೆ ಅಂಗಡಿ ವಿರುದ್ಧ ಪಡಿತರ ಆಕ್ರೋಶ

at Vedavati ration shop, people have expressed their outrage as the distribution of ration for 600 ration cards was not handled properly.
Photo Credit : Bharath

ಆಲೂರು: ತಾಲೂಕಿನ ಹುಣಸೆ ಗ್ರಾಮದ ವೇದಾವತಿ ನ್ಯಾಯಬೆಲೆ ಅಂಗಡಿಯಲ್ಲಿ ಸುಮಾರು 600 ಪಡಿತರ ಚೀಟಿಗಳಿದ್ದು ಪಡಿತರ ವಿತರಣೆ ಸರಿಯಾಗಿ ನಿರ್ವಹಣೆಯಾಗದೆ ಜನರು ಕಣ್ಣೀರಿಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.

ವೇದಾವತಿ ನ್ಯಾಯಬೆಲೆ ಅಂಗಡಿಯಲ್ಲಿ ಜನರಿಗೆ ತೂಕದಲ್ಲಿ ಮೋಸ, ಒಂದು ಪಡಿತರ ಚೀಟಿಗೆ ರೂ. 10 ಅಂತೆ 600 ಪಡಿತರ ಚೀಟಿಗಳಿಗೆ 6000 ರೂ.ಗಳನ್ನು ಬಡವರಿಂದ ಪಡೆಯುತ್ತಿದ್ದಾರೆ ಹಾಗೂ ಸರಿಯಾದ ಸಮಯದಲ್ಲಿ ಹೆಬ್ಬೆಟ್ಟು ತೆಗೆದುಕೊಳ್ಳದೆ ಸಾರ್ವಜನಿರಕನ್ನು, ಕೂಲಿ ಕಾರ್ಮಿಕರನ್ನು ಸತಾಯಿಸ್ತಾ ಇದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೂಡಲೇ ಆಹಾರ ನಿರೀಕ್ಷಕರು ಕ್ರಮ ಕೈಗೊಳ್ಳದೆ ಹೋದರೆ ಮುಂದಿನ ದಿನದಲ್ಲಿ ಉಗ್ರ ಹೋರಾಟವನ್ನು ಮಾಡುವುದಾಗಿ ಸುತ್ತಮುತ್ತಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಅಧಿಕಾರಿಗಳು ಶೀಘ್ರ ಸ್ಥಳಕ್ಕೆ ಭೇಟಿ ನೀಡಿ ಗ್ರಾಹಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಸಂಘಟನೆಯ ಮುಖಂಡರುಗಳು ಎಚ್ಚರಿಸಿದ್ದಾರೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *