ನುಗ್ಗೇಹಳ್ಳಿ: ತಾಲೂಕಿನ ರೈತರನ್ನು ಕಲ್ಪವೃಕ್ಷ ಕಾಮಧೇನು ಕೈ ಹಿಡಿದಿದೆ ಎಂದು ಶಾಸಕ ಸಿಎನ್ ಬಾಲಕೃಷ್ಣ ತಿಳಿಸಿದರು. ಹೋಬಳಿಯ ಸಂತೇ ಶಿವರ ಗೇಟ್ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಬಿಎಂಸಿ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಕೋವಿಡ್ ಸಂಕಷ್ಟದ ಕಾಲದಲ್ಲೂ ತಾಲೂಕಿನ ರೈತರನ್ನು ಕಲ್ಪವೃಕ್ಷ ಕಾಮಧೇನು ಕೈ ಬಿಡಲಿಲ್ಲ. ನನ್ನ10 ವರ್ಷಗಳ ಶಾಸಕರ ಅವಧಿಯಲ್ಲಿ ಶಿಕ್ಷಣ, ಆರೋಗ್ಯ, ನೀರಾವರಿ ಯೋಜನೆಗಳು, ಕೃಷಿ ಸೇರಿದಂತೆ ಅನೇಕ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ಏತ ನೀರಾವರಿ ಯೋಜನೆ ಬಲವರ್ಧನೆಯ ಮೂಲಕ ಸಂತೇ ಶಿವರ, ಅಗ್ರಹಾರ, ಬೆಳಗುಲಿ, ಯಾಚನಘಟ್ಟ, ದುಗ್ಗೇನಹಳ್ಳಿ ಸೇರಿದಂತೆ ಅನೇಕ ಕೆರೆಗಳನ್ನು ತುಂಬಿಸಲಾಗಿದೆ. ಇದರಿಂದ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಿದೆ.
ಹಾಲು ಉತ್ಪಾದಕರ ಸಂಘಕ್ಕೆ ಉಚಿತವಾಗಿ ಬಿಎಂಸಿ ಯೂನಿಟ್ ನೀಡಲಾಗಿದ್ದು, ಇದರಿಂದ ರೈತರು ಹಾಲು ಹಾಕಲು ಹೆಚ್ಚುವರಿಯಾಗಿ ಒಂದು ಗಂಟೆ ಸಮಯ ಸಿಗುತ್ತದೆ. ತಾಲೂಕಿನಲ್ಲಿ ಪ್ರತಿನಿತ್ಯ 2.25 ಲಕ್ಷ ಲೀಟರ್ ಹಾಲು ಬರುತ್ತಿದ್ದು ಹೈನೋಧ್ಯಮಕ್ಕೆ ಹೆಚ್ಚಿನ ಒತ್ತು ನೀಡುವ ದೃಷ್ಟಿಯಿಂದ ಹಾಲಿನ ಬೆಲೆ ಏರಿಕೆ ಮಾಡಲಾಗಿದೆ. ಇದರಿಂದ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಏತ ನೀರಾವರಿ ಯೋಜನೆಗಳ ಮೂಲಕ ತಾಲೂಕಿನಲ್ಲಿ ಸುಮಾರು 110 ಕೆರೆಗಳನ್ನು ತುಂಬಿಸಲಾಗಿದೆ. ರೈತರು ಹೆಚ್ಚಿನ ಬೆಲೆ ಆಸೆಗೆ ಖಾಸಗಿ ಡೈರಿಗಳಿಗೆ ಹಾಲನ್ನು ಹಾಕಬೇಡಿ, ಸರ್ಕಾರಿ ಸೌಮ್ಯದ ನಂದಿನಿ ಡೈರಿಗಳಿಗೆ ಹಾಲನ್ನು ಹಾಕಿ ಸಹಾಯ ಧನ ಪಡೆಯುವಂತೆ ತಿಳಿಸಿದರು.
ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಆರ್‌ಸಿ ಕೃಷ್ಣೇಗೌಡ, ಉಪಾಧ್ಯಕ್ಷ ರಂಗ ಶೆಟ್ಟಿ, ಗ್ರಾಪಂ ಅಧ್ಯಕ್ಷ ಲೋಕೇಶ್, ಉಪಾಧ್ಯಕ್ಷೆ ನಾಗರತ್ನ, ಸಂಘದ ಕಾರ್ಯದರ್ಶಿ ಆರ್. ಜಿ. ಚಕ್ರಪಾಣಿ, ಗ್ರಾ,ಪಂ. ಸದಸ್ಯರುಗಳಾದ ಲೋಕೇಶ, ನಿಂಗಮ್ಮ, ಧರ್ಮರಾಜ, ಮುಖಂಡರುಗಳಾದ ಎಚ್. ಎಮ್. ನಟರಾಜ, ಜಯಲಿಂಗೇಗೌಡ, ದೊರೆಸ್ವಾಮಿ, ಕುಳ್ಳೇಗೌಡ, ಇಟ್ಟಿಗೆ ನಾಗರಾಜು, ಉದ್ಯಮಿ ಚಿಪ್ಪಿನ ಚಂದ್ರು, ಸಂಘದ ನಿರ್ದೇಶಕರುಗಳಾದ ಮರುಳಪ್ಪ ಶೆಟ್ಟಿ, ಮಂಜು ಶೆಟ್ಟಿ, ಕಾಂತರಾಜ, ಕುಮಾರ, ಗುರುಮೂರ್ತಿ, ರಾಮ ಶೆಟ್ಟಿ, ಸುಧಾಮಣಿ, ಸುಮಿತ್ರ, ಒಕ್ಕೂಟದ ವಿಸ್ತರಣಾಧಿಕಾರಿಗಳಾದ ದಯಾನಂದ, ಮಹದೇವಸ್ವಾಮಿ, ಯೋಗೀಶ, ಕೃಷ್ಣಮೂರ್ತಿ, ಅಪರ್ಣ, ವಿದ್ಯಾ, ಪ್ರಶಾಂತ, ರಾಜೇಶ, ಮಂಜುಶ್ರೀ ಅನೇಕರು ಹಾಜರಿದ್ದರು.