ಆಲೂರು: ತಾಲೂಕಿನ ಮುಸ್ಲಿಂ ಬಾಂಧವರು ಪಟ್ಟಣದ ಈದ್‌ಗ ಮೈದಾನದಲ್ಲಿ ಪವಿತ್ರ ರಂಜಾನ್ ಹಬ್ಬವನ್ನು ಆಚರಿಸಿದ್ದರು. ರಂಜಾನ್ ಹಬ್ಬಕ್ಕೆ ಆಲೂರು ತಾಲೂಕಿನ ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕೆ.ಎಸ್ ಮಂಜೇಗೌಡ ಈದ್‌ಗ ಮೈದಾನಕ್ಕೆ ತೆರಳಿ ಪಟ್ಟಣದ ಮುಸ್ಲಿಂ ಬಾಂಧವರಿಗೆ ರಂಜಾನ್ ಹಬ್ಬದ ಶುಭಾಶಯಗಳು ಕೋರಿದರು.
ಆಲೂರು ಜಾಮಿಯಾ ಮಸೀದಿಯ ಅಧ್ಯಕ್ಷ ಅಬ್ದುಲ್ ವಾಹಿದ್, ಮುಖಂಡರಾದ ಕಬೀರ್ ಅಹಮದ್, ಖಾಲಿದ್ ಪಷಾ, ಜಾಫರ್ ಸರ್ವರ್, ಪಷ ಅಬ್ದುಲ್ ಖುದ್ದೂಸ್ ಬಾಬು, ತೌಪಿಕ್ ಅಹಮದ್ ಮುಸ್ಲಿಂ ಮುಖಂಡರು ಹಾಜರಿದ್ದರು.