ಚನ್ನರಾಯಪಟ್ಟಣ: ಗುರುಕಲಾ ಸಂಘದ ನೂತನ ಕಟ್ಟಡ ಕಾಮಗಾರಿಗೆ ಶ್ರವಣಬೆಳಗೊಳ ಕ್ಷೇತ್ರದ ಶಾಸಕ ಸಿ.ಎನ್ ಬಾಲಕೃಷ್ಣ ಶಂಕುಸ್ಥಾಪನೆ ನೆರವೇರಿಸಿದರು.
ನಂತರ ಮಾತನಾಡಿದ ಬಾಲಣ್ಣನವರು ರಂಗಭೂಮಿ ಕಲಾವಿದರ ಕೋರಿಕೆಯನ್ನು ಈ ದಿನ ಪೂರ್ಣಗೊಳಿಸಲಾಗಿದೆ. ಎಲ್ಲಾ ಕಲಾವಿದರು ನಾಟಕ ಅಭ್ಯಾಸ ಮಾಡಲು ಈ ಸ್ಥಳವನ್ನು ಸದುಪಯೋಗಪಡಿಸಿಕೊಂಡು ರಂಗಭೂಮಿ ಕಲೆಯನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ನೂತನ ಕಟ್ಟಡಕ್ಕೆ ಹೆಚ್ಚಿನ ರೀತಿಯ ಸಹಾಯ ಮತ್ತು ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ಶಾಸಕ ಸಿಎನ್ ಬಾಲಕೃಷ್ಣ, ಪುರಸಭೆ ಅಧ್ಯಕ್ಷೆ ಶ್ರೀಮತಿ ರೇಖಾ ಅನಿಲ್, ಉಪಾಧ್ಯಕ್ಷೆ ಲಕ್ಷ್ಮಿ ವೆಂಕಟೇಶ, ಗುರುಕಲಾ ಸಂಘದ ಅಧ್ಯಕ್ಷ ಎಚ್.ಎನ್. ರಾಮಣ್ಣ, ಉಪಾಧ್ಯಕ್ಷ ಬಂಡಿಹಳ್ಳಿ ನಾಗಣ್ಣ, ಡಿ. ಎಸ್ ದೇವರಾಜ, ಕಾರ್ಯಾಧ್ಯಕ್ಷರಾದ ಅಂತನಹಳ್ಳಿ ಸ್ವಾಮಿಗೌಡ, ಸಿ. ಜಿ ಮಂಜಪ್ಪ, ಕಾನೂನು ಸಲಹೆಗಾರ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಮಹಾದೇವ, ಸಹ ಕಾರ್ಯದರ್ಶಿ ಬಿ. ಕೆ. ಬೆಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಜೋಗಿಪುರ ಶೇಖರ, ಸಾಂಸ್ಕೃತಿಕ ಕಾರ್ಯದರ್ಶಿ ಎಚ್.ಎನ್ ನಂಜುಂಡೇಗೌಡ, ಖಜಾಂಚಿ ಎಚ್.ಎಲ್ ಲಕ್ಷ್ಮಿನರಸಿಂಹಮೂರ್ತಿ, ಹೊಳೆನರಸೀಪುರ ತಾಲೂಕು ಕಸಾಪ ಅಧ್ಯಕ್ಷ ಪುಟ್ಟೇಗೌಡರು, ನಿಕಟ ಪೂರ್ವ ಸಂಘಟನಾ ಕಾರ್ಯದರ್ಶಿ ವೇಣುಗೋಪಾಲ, ಸಂಘದ ನಿರ್ದೇಶಕ ಪಡುವನಹಳ್ಳಿ ರೇವಣ್ಣ, ಪಂಡಿತ ಕೃಷ್ಣಮೂರ್ತಿ, ಅಗ್ರಹಾರ ಕೊಪ್ಪಲು ರವಿ, ಹೊನ್ನೇಶೆಟ್ಟಿಹಳ್ಳಿ ಕಾಂತರಾಜ, ಶೆಟ್ಟಿಹಳ್ಳಿ ಜಯಣ್ಣ, ಸಿ. ಆರ್. ಕುಮಾರ್, ಜೆ.ಇ.ರಮೇಶ, ಸಿಂಗೇನಹಳ್ಳಿ ಶಂಕರ, ನಂದಿಪುರ ಸುಧಾಕರ, ಸೇರಿದಂತೆ ಗುರುಕಲಾ ಸಂಘದ ಸರ್ವ ಸದಸ್ಯರು ಹಾಜರಿದ್ದರು.