News Karnataka
Saturday, June 10 2023
ಸಿಟಿಜನ್ ಕಾರ್ನರ್

ಗುರುಕಲಾ ಸಂಘದ ನೂತನ ಕಟ್ಟಡ ಶಂಕುಸ್ಥಾಪನೆ

The foundation stone laying of the new building of the Gurukala association in channarayapatna will be held on 27th
Photo Credit : Bharath

ಚನ್ನರಾಯಪಟ್ಟಣ: ಗುರುಕಲಾ ಸಂಘದ ನೂತನ ಕಟ್ಟಡ ಶಂಕುಸ್ಥಾಪನೆಗೆ ಸೋಮವಾರ ಶಾಸಕ ಸಿ.ಎನ್ ಬಾಲಕೃಷ್ಣ ಚಾಲನೆ ನೀಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಎಚ್.ಎನ್ ರಾಮಣ್ಣ ತಿಳಿಸಿದರು.

ಪಟ್ಟಣದ ಗುರುಕಲಾ ಸಂಘದ ಕಚೇರಿಯಲ್ಲಿ ಸರ್ವ ಸದಸ್ಯರ ತುರ್ತು ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ರಾಮಣ್ಣ ಗುರುಕಲಾ ಸಂಘಕ್ಕೆ ಕಲಾವಿದರ ಕಲಾ ಸೇವೆಯನ್ನು ಗುರುತಿಸಿ ಎರಡು ಕುಂಟೆ ನಿವೇಶನವನ್ನು ನೀಡಿರುವ ಶಾಸಕ ಸಿ.ಎನ್ ಬಾಲಕೃಷ್ಣರವರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಅರ್ಪಿಸಿದರು. ನಾಡಿದ್ದು ೨೭.೦೩.೨೦೨೩ನೇ ಸೋಮವಾರ ಬೆಳಿಗ್ಗೆ ೯:೦೦ ಗಂಟೆಗೆ ನಗರ ಯೋಜನಾ ಪ್ರಾಧಿಕಾರದ ಕಚೇರಿಯ ಹಿಂಭಾಗದಲ್ಲಿ ಇರುವ ನಿವೇಶನದಲ್ಲಿ ಗುರು ಕಲಾ ಸಂಘದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮವು ಶಾಸಕ ಸಿ.ಎನ್ ಬಾಲಣ್ಣನವರ ಅಮೃತ ಹಸ್ತದಿಂದ ನೆರವೇರಲಿದೆ ಎಂದು ತಿಳಿಸಿದರು. ಚನ್ನರಾಯಪಟ್ಟಣ ತಾಲೂಕಿನ ಗುರುಕಲಾ ಸಂಘದ ಸರ್ವ ಸದಸ್ಯರು ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಎಚ್‌. ಎನ್ ರಾಮಣ್ಣ, ಉಪಾಧ್ಯಕ್ಷ ಬಂಡಿಹಳ್ಳಿ ನಾಗಣ್ಣ, ಡಿ.ಎಸ್ ದೇವರಾಜ, ಕಾರ್ಯಾಧ್ಯಕ್ಷರಾದ ಅಂತನಹಳ್ಳಿ ಸ್ವಾಮಿಗೌಡ, ಗೌರವಾಧ್ಯಕ್ಷ ವೆಂಕಟಸುಬ್ಬಯ್ಯ, ಸಿ. ಜಿ ಮಂಜಪ್ಪ, ಕಾನೂನು ಸಲಹೆಗಾರ ಶ್ರೀನಿವಾಸ, ಪ್ರಧಾನ ಕಾರ್ಯದರ್ಶಿ ಮಹಾದೇವ, ಸಹ ಕಾರ್ಯದರ್ಶಿ ಬಿ. ಕೆ. ಬೆಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿ ಜೋಗಿಪುರ ಶೇಖರ, ಸಾಂಸ್ಕೃತಿಕ ಕಾರ್ಯದರ್ಶಿ ಎಚ್‌.ಎನ್. ನಂಜುಂಡೇಗೌಡ, ಖಜಾಂಚಿ ಎಚ್.ಎಲ್ ಲಕ್ಷ್ಮಿನರಸಿಂಹಮೂರ್ತಿ, ಹೊಳೆನರಸೀಪುರ ತಾಲೂಕು ಕಸಾಪ ಅಧ್ಯಕ್ಷ ಪುಟ್ಟೇಗೌಡರು, ನಿಕಟ ಪೂರ್ವ ಸಂಘಟನಾ ಕಾರ್ಯ ದರ್ಶಿ ವೇಣುಗೋಪಾಲ್, ಸಂಘದ ನಿರ್ದೇಶಕ ಪಡುವನಹಳ್ಳಿ ರೇವಣ್ಣ, ಪಂಡಿತ ಕೃಷ್ಣಮೂರ್ತಿ, ಅಗ್ರಹಾರಕೊಪ್ಪಲು ರವಿ, ಹೊನ್ನೇಶೆಟ್ಟಿಹಳ್ಳಿ ಕಾಂತರಾಜ, ದಿಂಡಗೂರು ಮೀನ್ ರಾಜಣ್ಣ, ಶೆಟ್ಟಿಹಳ್ಳಿ ಜಯಣ್ಣ, ಸಿ ಆರ್ ಕುಮಾರ, ಜೆ.ಇ.ರಮೇಶ, ಸಿಂಗೇನಹಳ್ಳಿ ಶಂಕರ, ನಂದಿಪುರ ಸುಧಾಕರ ಸೇರಿದಂತೆ ಗುರುಕಲಾ ಸಂಘದ ಸರ್ವ ಸದಸ್ಯರು ಹಾಜರಿದ್ದರು.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *