ಬೇಲೂರು: ಜೀವನದಲ್ಲಿ ಕಷ್ಟವನ್ನು ಅರಿತವರು ಸಾರ್ವಜನಿಕ ಸೇವೆಯಲ್ಲಿ ಮುಂಚೂಣಿಯಲ್ಲಿರುತ್ತಾರೆ ಎಂದು ತೆಂಕಲಗೋಡು ಮಠದ ಚೆನ್ನಸಿದ್ಧ ಶಿವಸ್ವಾಮಿ ಹೇಳಿದರು.
ಅರೇಹಳ್ಳಿಯಲ್ಲಿ ಕೊಡುಗೈ ದಾನಿ ತುಳಸಿದಾಸ ಕುಟುಂಬದ ೨೫ನೇ ವರ್ಷದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ದೀಪವನ್ನು ಬೆಳಗಿಸಿ ಉಚಿತ ಆಂಬುಲೆನ್ಸ್, ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ನಂತರ ಮಾತನಾಡಿದ ಅವರು, ನಮ್ಮ ಮನೆಯ ಹಿಂದಿನ ವಂಶದವರ ಹೆಸರು ಗೊತ್ತಿರುವವರು ಕಡಿಮೆ. ಆದರೆ ದೇಶದ ಮಹಾನ್ ವ್ಯಕ್ತಿಗಳ ಹೆಸರನ್ನು ನೆನಪಿನಲ್ಲಿ ಇಟ್ಟಿಕೊಂಡಿರುತ್ತೇವೆ. ಅದೇ ರೀತಿ ತುಳಸಿದಾಸ್ ಅವರ ಹೆಸರು ದಾನಗಳಲ್ಲಿ ಉಳಿಯಲಿದೆ. ನಿಸ್ವಾರ್ಥದಿಂದ ಕೆಲಸ ಮಾಡಿ, ಪರೋಪಕಾರಿಯಾಗಿ ಸಮಾಜಕ್ಕಾಗಿ ಜೀವನ ನಡೆಸುತ್ತಾರೊ ಅವರನ್ನು ಮಾತ್ರ ಸಮಾಜದವರು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಅಂತವರ ಹೆಸರು ತುಳಸಿ ಕುಟುಂಬ ಎಲ್ಲರ ಮನಸಿನಲ್ಲೂ ಇರುವಂತೆ ಮಾಡುತ್ತಿದ್ದಾರೆ.
ಮನುಷ್ಯನ ಸಾಧನೆ ಮಾಡಬೇಕಾದರೆ ಈ ದೇಹ, ಆತ್ಮ, ಜನ್ಮ ಯಾಕಿದೆ ಯೋಚನೆಮಾಡಬೇಕಿದೆ. ನಮ್ಮ ಜೀವನ ಅಂತ್ಯದಲ್ಲಿ ಒಂದು ಒಳ್ಳೆ ಕೆಲಸ ಮಾಡಬೇಕಿದೆ. ಕೇವಲ ನಮ್ಮ ಸ್ವಂತಕ್ಕಾಗಿ ಮಾಡಿ ಒಂಟಿಯಾಗಿ ಹೋಗುವುದಲ್ಲ. ಕೆಲವರು ಸಮಾಜ ಸೇವೆ ಮಾಡಿದರೆ ಇನ್ನು ಕೆಲವರು ತಮ್ಮ ಸ್ವಂತಕ್ಕಾಗಿ ಮಾಡುತ್ತಾರೆ. ಜೀವನದಲ್ಲಿ ಕಷ್ಟ ಪಟ್ಟ ವ್ಯಕ್ತಿ ಸಮಾಜದಲ್ಲಿ ಏನಾದರೂ ಸಹಾಯ ಮಾಡಲು ಇಷ್ಟ ಪಡುತ್ತಾನೆ. ಸುಮಾರು ೮-೧೦ ಲಕ್ಷದ ಅಂಬುಲೆನ್ಸ್ ವಿತರಿಸಿದ್ದಾರೆ. ಅಲ್ಲದೆ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಯಾಗಿ ನೀಡುತ್ತಿದ್ದಾರೆ. ಇದು ಶಾಶ್ವತ ಕೆಲಸ, ಅದೇ ರೀತಿ ಅವರ ಜೀವನವು ಸುಖಕರವಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಸೀದಿ ಮೌಲಾನ ಅಸ್ಲಮ್, ತುಳಸಿಕುಟುಂಬ, ಗಣ್ಯರು ಇದ್ದರು