ಸಕಲೇಶಪುರ: ಸಕಲೇಶಪುರ ತಾಲೂಕು ಹೆತ್ತೂರು ಹೋಬಳಿಯ ವಳಲಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸುದರ್ಶನ್ ಅವಿರೋಧವಾಗಿ ಆಯ್ಕೆಯಾದರು.
ವಳಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರೇಣು ಕುಮಾರ್ ಅವರು ಒಪ್ಪಂದದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಖಾಲಿಯಿದ್ದ ಅಧ್ಯಕ್ಷರ ಗದ್ದುಗೆಯನ್ನು ಒಪ್ಪಂದದ ಮೇರೆಗೆ ವಳಲಹಳ್ಳಿ ಗ್ರಾಮದ ಬಿಜೆಪಿ ಬೆಂಬಲಿತ ಸದಸ್ಯರಾದ ಸುದರ್ಶನ್ ಅವರನ್ನು ಇಂದು ಅವಿರೋಧವಾಗಿ ಚುನಾವಣಾ ಅಧಿಕಾರಿ ರಾಮಕೃಷ್ಣ ಸಮ್ಮುಖದಲ್ಲಿಆಯ್ಕೆ ಮಾಡಲಾಯಿತು.
ಸಿಮೆಂಟ್ ಮಂಜು, ನಿಕಟಪೂರ್ವ ಅಧ್ಯಕ್ಷರಾದ ರೇಣು ಕುಮಾರ್, ಸ್ಥಳೀಯ ಬಿಜೆಪಿ ಮುಖಂಡರಾದ ವಳಲಹಳ್ಳಿಅಶ್ವಥ್ ಹಾಗೂ ಉಪಾಧ್ಯಕ್ಷರದ ಶೀಲಾ, ಸದಸ್ಯರಾದ ಕೆ.ಪಿ. ಆನಂದ, ಭವಾನಿ, ಕರಡಿಗಾಲ ಹರೀಶ, ಮಾಜಿ ಸೈನಿಕ ನಂದೀಶ ಸೇರಿದಂತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಸ್ಥರು ಭಾಗಿಯಾಗಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು.