ಹಾಸನ: ಮುಂದೆ ನಡೆಯುವ ವಿಧಾನಸಭಾ ಚುನಾವಣೆಯ ದಿನಾಂಕವು ಈಗಾಗಲೇ ನಿಗದಿಯಾಗಿದ್ದು, ಈ ವೇಳೆ ಯಾವ ಅಕ್ರಮಗಳು ನಡೆಯದಂತೆ ಮುನ್ನೆಚ್ಚರಿಕ ಕ್ರಮವಾಗಿ ಜಿಲ್ಲೆಯ ಮುಖ್ಯ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಪೊಲೀಸ್ ಸಿಬ್ಬಂದಿ ಮತ್ತು ರೆವಿನ್ಯೂ ಸಿಬ್ಬಂದಿಗಳನ್ನು ಹಾಕಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಛೇರಿ ಸಭಾಂಗಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ನಗರ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ಅಳವಡಿಸಲಾಗಿತ್ತು. ಈಗ ಎಲೆಕ್ಷೆನ್ ಮಾಡಲ್ ಕೋಡಫ್ ಡಿಕ್ಲೇರ್ ಆಗುವ ಮೊದಲು ಕೇವಲ ಪೊಲೀಸರಿದ್ರು, ಈಗ ನೀತಿಸಂಹಿತೆ ಜಾರಿಯಾದ ಮೇಲೆ ಒಂದೊಂದು ಕಡೆ ಇಬ್ಬರು ಪೊಲೀಸರು ಜೊತೆಗೆ ಇಬ್ರು ರೆವಿನ್ಯೂ ಸಿಬ್ಬಂದಿಗಳಿದ್ದಾರೆ. ಬರುವಂತಹ ದಿನಗಳಲ್ಲಿ ನಾಲ್ಕು ಜನ ಪೊಲೀಸರನ್ನು ಚೆಕ್‌ಪೋಸ್ಟ್‌ಗಳಿಗೆ ಹಾಕಲಾಗುವುದು. ಈಗಾಗಲೇ ಚೆಕ್‌ಪೋಸ್ಟ್‌ಗಳಲ್ಲಿ ಅನೇಕ ಅಕ್ರಮ ಹಣ, ಮದ್ಯ ಸಾಗಾಣಿಕೆ ಮಾಡುವಾಗ ಎಲ್ಲಾವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆ ವೇಳೆಯಲ್ಲಿ ಪ್ರತಿ ಗಡಿ ಭಾಗದಲ್ಲಿ ಪೊಲೀಸ್ ಮತ್ತು ರೆವಿನ್ಯೂ ಸಿಬ್ಬಂದಿಗಳು ಪರಿಶೀಲಿಸಿ ವಾಹನವನ್ನು ಚುನಾವಣೆ ಆಯೋಗದ ಪ್ರಕಾರ 50 ಸಾವಿರಕ್ಕಿಂತ ಹೆಚ್ಚು ಹಣವನ್ನು ಕೈಲಿ ಇಟ್ಟುಕೊಂಡು ಪ್ರಯಾಣ ಮಾಡುವಂತಿಲ್ಲ. ಹಣ ಮತ್ತು ಇತರೆ ಸಾಗಾಣಿಕೆ ಮಾಡಲಾಗುತ್ತಿದ್ದರೇ ಅದಕ್ಕೆ ಸರಿಯಾದ ದಾಖಲಾತಿ ಕೊಟ್ಟು ಸಾಗಬಹುದಾಗಿದೆ. ತನಿಖೆ ವೇಳೆ ಪ್ರತಿಯೊಬ್ಬರೂ ಶಾಂತಿಯಿಂದ ಸಹಕರಿಸಬೇಕು ಎಂದರು.
ಏಪ್ರಿಲ್ 15ರಿಂದ ಚೆಕ್‌ಪೋಸ್ಟ್‌ಗಳು ಇನ್ನಷ್ಟು ಗಟ್ಟಿ ಮಾಡಲು ಕಂಪನಿಗಳು ಸೇರಲಿದೆ. ಎಲ್ಲೆಲ್ಲಿ ಪೊಲೀಸ್, ಇತರೆ ಸಿಬ್ಬಂದಿಗಳ ಕೊರತೆ ಇದೆ ಅಲ್ಲಿಗೆ ಇತರೆ ಭಾಗಗಳಿಂದ ಕರೆ ತರಲು ಈಗಾಗಲೇ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.