ಹೊಳೆನರಸೀಪುರ: ವಿಧಾನ ಸಭೆ ಚುನಾವಣೆಯ ಬಂದೋಬಸ್ತ್‌ಗೆ ನಾವು ಸಿದ್ದರಾಗಿ ಬಂದಿದ್ದೇವೆ ಎಂಬುದನ್ನು ಮತದಾರರಿಗೆ ಮನವರಿಕೆ ಮಾಡಲು ಅರೆಮಿಲಿಟರಿ ಪಡೆಯ ಯೋಧರು ಶುಕ್ರವಾರ ಪಟ್ಟಣದಲ್ಲಿ ಪಥ ಸಂಚಲನ ನಡೆಸಿದರು.
ಈ ಪಡೆಯಲ್ಲಿ 250 ಜನ ಯೋಧರು, ಒಬ್ಬರು ಅಸಿಸ್ಟೆಂಟ್ ಕಮಿಷನರ್, ಒಬ್ಬರು ಡಿವೈಎಸ್ಪಿ, ನಾಲ್ವರು ಇನ್ಸ್ಪೆಕ್ಟರ್, 16 ಜನ ಸಬ್ ಇನ್ಸ್ಪೆಕ್ಟರ್ ತಂಡದಲ್ಲಿದ್ದಾರೆ. ಇದಲ್ಲದೆ ಹೊಳೆನರಸೀಪುರ ಉಪ ವಿಭಾಗದ ಡಿವೈಎಸ್ಪಿ ಒಬ್ಬರು, ಇಬ್ಬರು ಇನ್ಸ್ಪೆಕ್ಟರ್, 6 ಜನ ಸಬ್‌ಇನ್ಸ್ಪೆಕ್ಟರ್, 22 ಜನ ಪೊಲೀಸರು ಪಥ ಸಂಚಲನದಲ್ಲಿ ಭಾಗವಹಿಸಿದ್ದಾರೆ ಎಂದು ಉಪ ವಿಭಾಗದ ಡಿ.ವೈ.ಎಸ್.ಪಿ. ಮುರಳಿಧರ್ ತಿಳಿಸಿದ್ದಾರೆ.
2023ರ ಮೇ 10ರಂದು ನಡೆಯುವ ಚುನಾವಣೆ ಸಂದರ್ಭದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶ ನೀಡಬಾರದು. ಚುನಾವಣೆ ಅಕ್ರಮದಲ್ಲಿ ತೊಡಗಿದರೆ ಕಟ್ಟು ನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ತಾಲ್ಲೂಕಿನ 325 ಮತಗಟ್ಟೆಗಳಲ್ಲಿ ಪೊಲೀಸ್ ಹಾಗೂ ಅರೆಮಿಲಿಟರಿ ಪಡೆಯ ಯೋಧರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.