ಅರಸೀಕೆರೆ: ಕಾರ್ಮಿಕ ಇಲಾಖೆಯಲ್ಲಿ ಒಂಭತ್ತು, ಹತ್ತನೇ ತರಗತಿ, ಪ್ರಥಮ ಪಿಯುಸಿ, ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಮಕ್ಕಳಿಗೆ ಕಾರ್ಮಿಕ ಇಲಾಖೆ ವತಿಯಿಂದ ಉಚಿತವಾಗಿ ಶಾಲಾ ಕಿಟ್‌ಗಳನ್ನು ವಿತರಿಸಲಾಯಿತು.
ಅರಸೀಕೆರೆಯ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಚ್.ಕೆ. ಪ್ರಭಾಕರ ಅವರ ಮಾರ್ಗದರ್ಶನದಲ್ಲಿ ಇಲಾಖೆಯ ಸಿಬ್ಬಂದಿಯವರಾದ ಅನಿಲ್ ಕುಮಾರ್ ಹಾಗೂ ಪೊಲೀಸ್ ಬಂದ್ ಬಸ್ತ್ ನಡುವೆ ನೂರಾರು ಕಾರ್ಮಿಕರುಗಳ ಮಕ್ಕಳಿಗೆ ಶಾಲಾ ಕಿಟ್‌ಗಳನ್ನು ವಿತರಿಸಲಾಯಿತು. ಶಾಲಾ ಕಿಟ್‌ಗಳನ್ನು ಪಡೆದ ಕಾರ್ಮಿಕರು ಇಲಾಖೆ ನೀಡಿದ ಸವಲತ್ತನ್ನು ಪಡೆದು ಹರ್ಷ ವ್ಯಕ್ತಪಡಿಸಿದರು.
ಕಾರ್ಮಿಕ ಸಂಘಟನೆಯ ಮುಖಂಡರಾದ ಬಾಣವರ ಉಮೇಶ್ ಮಾತನಾಡಿ, ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕರಾದ ಎಚ್.ಕೆ. ಪ್ರಭಾಕರ ಅವರು ಚಿಕ್ಕಮಂಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಕೊರೋನಾ ಸಂದರ್ಭದಲ್ಲಿ ಕಾರ್ಮಿಕ ಇಲಾಖೆ ನೀಡಿದ ಆಹಾರ ಕಿಟ್ ಗಳಿಂದ ಹಿಡಿದು ಈಗ ನೀಡುತ್ತಿರುವ ಪೇಂಟರ್ ಕಿಟ್, ಪ್ಲಂಬರ್ ಕಿಟ್, ಕಾರ್ಪೆಂಟರ್ ಕಿಟ್, ಎಲೆಕ್ಟ್ರಿಷಿಯನ್ ಕಿಟ್ ಮುಂತಾದ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ತಲುಪಿಸಿದ ಅಧಿಕಾರಿ ಆಗಿರುತ್ತಾರೆ ಎಂದು ಹೇಳಿದರು.
ಕಾರ್ಮಿಕ ಶಾಲಾ ಕಿಟ್‌ಗಳನ್ನು ಪಡೆದ ಕಾರ್ಮಿಕರು ಹರ್ಷ ವ್ಯಕ್ತಪಡಿಸಿದರು. ಹಾಸನ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಸವಲತ್ತುಗಳನ್ನು ಸರಿಯಾಗಿ ತಲುಪಿಸದೆ ಗೊಂದಲವಾದ ವರದಿಗಳು ಪತ್ರಿಕೆಗಳಲ್ಲಿ ವರದಿಯಾಗಿರುತ್ತವೆ. ಆದರೆ ಅರಸೀಕೆರೆಯಲ್ಲಿ ಇಂತಹ ಯಾವುದೇ ಆಸ್ಪದಗಳಿಗೆ ಅವಕಾಶವಿಲ್ಲದೆ ಅಧಿಕಾರಿಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಬಾಣಾವರ ಉಮೇಶ ತಿಳಿಸಿದರು.