ಹಾಸನ: ಆಲೂರು ತಾಲೂಕಿನ ಕೆಂಚಮ್ಮನ ಹೊಸಕೋಟೆ ಹೋಬಳಿ ಅಬ್ಬನ ಗ್ರಾಮದ 23 ಮನೆಗಳಿಗೆ ರಸ್ತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ನಿವಾಸಿಗಳಾದ ಮಂಜುನಾಥ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಅಬ್ಬನ ಗ್ರಾಮದಲ್ಲಿ ಸರ್ವೆ ನಂಬರ್ 205ರಲ್ಲಿ ನಿವೇಶನಗಳಿದ್ದು 23 ಕುಟುಂಬಗಳು ವಾಸ ಮಾಡುತ್ತಿದೆ. ಇದೀಗ ಈ ಮನೆಗಳಿಗೆ ಸಂಪರ್ಕ ರಸ್ತೆ ಇಲ್ಲದಿರುವ ಕಾರಣ ದಿನನಿತ್ಯದ ಶಾಲೆ, ಸೇರಿದಂತೆ ಇತರೆ ಕೆಲಸದ ನಿಮಿತ್ತ ಓಡಾಟಕ್ಕೆ ತೊಂದರೆಯಾಗಿದೆ.
ಈ ಸಂಬಂಧ ಸ್ಥಳೀಯರೆಲ್ಲ ಸೇರಿ ಪ್ರತಿಭಟನೆ ನಡೆಸಿದರೂ ಇದುವರೆಗು ಪರಿಹಾರ ದೊರಕಿಲ್ಲ ಎಂದು ದೂರಿದರು. ಇದೀಗ ಮನೆಯಿಂದ ಸಂಪರ್ಕ ಇರುವ ರಸ್ತೆಯಲ್ಲಿ ನಡೆದಾಡುವ ಸಂದರ್ಭದಲ್ಲಿ ಸ್ಥಳೀಯರಾದ ಭಾಗ್ಯಮ್ಮ, ಕಾರ್ತಿಕ್, ಲೋಕೇಶ್ ಎಂಬುವವರು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದಾರೆ. ದಿನನಿತ್ಯ ಗಲಾಟೆಗಳು ನಡೆಯುತ್ತಿದೆ. ಈಗಾಗಲೇ ಇವರ ವಿರುದ್ಧ ಆಲೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಆದ್ದರಿಂದ ಜಿಲ್ಲಾಧಿಕಾರಿ ಸೇರಿದಂತೆ ಸ್ಥಳೀಯ ಅಧಿಕಾರಿಗಳೊಂದಿಗೆ ಸರ್ವೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮಂಜುನಾಥ್ ಮನವಿ ಸಲ್ಲಿಸಿದರು.
ಈ ವೇಳೆ ಮಂಜುನಾಥ ಅವರ ಪತ್ನಿ ಅನು, ಮಕ್ಕಳಾದ ನಿಖಿತ್, ಧನುಷ್, ರಮ್ಯಾ ಇದ್ದರು.