News Karnataka
Saturday, June 10 2023
ಸಿಟಿಜನ್ ಕಾರ್ನರ್

ಖಾಸಗಿ ವ್ಯಕ್ತಿಗೆ ಕುಮ್ಮಕ್ಕು ನೀಡುತ್ತಿರುವ ಪಂಚಾಯತ್ ಅಧಿಕಾರಿಗಳು ಹಾಗೂ ಅಧ್ಯಕ್ಷರು?

Public is blaming Arakalagudu Mokali Gram Panchayat
Photo Credit : Bharath

ಅರಕಲಗೂಡು: ತಾಲೂಕಿನ ಮೊಕಲಿ ಗ್ರಾಮ ಪಂಚಾಯಿತಿಯಲ್ಲಿ ಖಾಸಗಿ ವ್ಯಕ್ತಿಗೆ ಪಂಚಾಯತ್ ಅಧಿಕಾರಿಗಳು ಹಾಗೂ ಅಧ್ಯಕ್ಷರು ಕುಮ್ಮಕ್ಕು ನೀಡುತ್ತಿದ್ದಾರೆ.

ಖಾಸಗಿ ವ್ಯಕ್ತಿ ಶರತ್ ಎಂಬತನನ್ನು ಈ ಹಿಂದೆ ಇರುವಂತ ಆಡಳಿತ ಮಂಡಳಿಯು ಡಾಟ ಆಪರೇಟರ್ ಆಗಿ ಕೆಲಸಕ್ಕೆ ಆಯ್ಕೆ ಮಾಡಲಾಗಿತ್ತು. ಈ ಕೆಲಸಕ್ಕೆ ರಾಧಾ ಎನ್ನುವ ಹೆಣ್ಣು ಮಗಳು ಮೊದಲು ಆಯ್ಕೆ ಆಗಿರುತ್ತಾರೆ. ಈ ಹೆಣ್ಣು ಮಗಳ ಕೆಲಸಕ್ಕೆ ತೊಂದರೆ ಕೊಟ್ಟು ಕೆಲಸದಿಂದ ಬಿಡುಗಡೆಗೊಳಿಸಲಾಗಿತ್ತು. ಆದ್ದರಿಂದ ನೊಂದ ರಾಧಾ ಎನ್ನುವ ಮಹಿಳೆ ನ್ಯಾಯಾಲಯದ ಮೊರೆ ಹೋದರು. ನ್ಯಾಯಾಲಯದಲ್ಲಿ ರಾಧಾ ಎಂಬುವರ ಪರವಾಗಿ ನ್ಯಾಯಾಲಯದಿಂದ ತೀರ್ಪು ನೀಡಲಾಯಿತು.

ನಂತರ ರಾಧರವರು ಪುನಃ ಮೊಕಲಿ ಗ್ರಾಮ ಪಂಚಾಯತಿ ಡಾಟಾ ಆಪರೇಟರ್ ಆಗಿ ಕೆಲಸಕ್ಕೆ ಹೋಗಲು ಆರಂಭಿಸುತ್ತಾರೆ. ನಂತರ ಈ ಹುದ್ದೆಗೆ ನೇಮಕಗೊಂಡ ಶರತ್ ಎಂಬಾತವನ್ನು ಕೆಲಸದಿಂದ ಬಿಡುಗಡೆಗೊಳಿಸುತ್ತಾರೆ. ಮೊಕಲಿ ಗ್ರಾಮ ಪಂಚಾಯಿತಿಯಲ್ಲಿ ರಾಧಾರವರು ಕೆಲಸ ನಿರ್ವಹಿಸುತ್ತಿದ್ದರು ಕೂಡ ವೃತ್ತಿಯಿಂದ ಬಿಡುಗಡೆಗೊಳಿಸಿರುವ ಶರತ್ ಎಂಬಾತನು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ ಹಾಗೂ ಕಾರ್ಯದರ್ಶಿ ಡಿಸಿ ಗೌಡರ ಕೈವಾಡದಿಂದ ಪ್ರತಿದಿನ ಕಚೇರಿಗೆ ಬಂದು ಅಧಿಕಾರಿಗಳು ಕುಳಿತುಕೊಳ್ಳುವ ಜಾಗದಲ್ಲಿ ಇವನು ಕುಳಿತುಕೊಳ್ಳುವುದು ಹೋಗುವುದು ಇವನ ಚಾಳಿ ಆಗಿದೆ.

ಇವನ ಸ್ವಂತ ಗ್ರಾಮಕ್ಕೂ ಮೊಕಲಿ ಗ್ರಾಮ ಪಂಚಾಯಿತಿಗೂ ಸಂಬಂಧ ಇರುವುದಿಲ್ಲ. ಗ್ರಾಮ ಪಂಚಾಯತ್‌ಗೂ ಇವನಿಗೂ ಸಂಬಂಧವೇ ಇರುವುದಿಲ್ಲ. ಆದರೂ ಪ್ರತಿದಿನ ಬಂದು ಕುಳಿತುಕೊಂಡು ಸಂಜೆ ಹೊರಟು ಹೋಗುತ್ತಾನೆ. ಇಷ್ಟೆಲ್ಲ ಕಚೇರಿ ಒಳಗೆ ನಡೆಯುತ್ತಿದ್ದರು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ ಮೌನ ವಹಿಸುತ್ತಿರುವುದಾದರೂ ಯಾಕೆ? ತಿಳಿಯದು ಹಾಗೂ ಪಂಚಾಯತ್ ಕಾರ್ಯದರ್ಶಿ ಡಿಸಿ ಗೌಡ ಇವನನ್ನು ಎಲ್ಲ ಕೆಲಸ ಕಾರ್ಯಗಳಿಗೆ ಜೊತೆಯಲ್ಲಿ ಕರೆದುಕೊಂಡು ತಿರುಗಾಡುತ್ತಿರುವುದಾದರೂ ಯಾಕೆ ಎಂದು ತಿಳಿಯದು.

ಇವನು ಕೆಲಸ ಕಳೆದುಕೊಂಡ ನಂತರ ಸಾರ್ವಜನಿಕರಲ್ಲಿ ನಾನು ಆ ಕೆಲಸ ಮಾಡಿಕೊಡುತ್ತೇನೆ, ಈ ಕೆಲಸ ಮಾಡಿ ಕೊಡುತ್ತೇನೆ ಎಂದು ಹಣ ಪಿಕಾಯಿಸುತ್ತಿರುವುದು ಸಾರ್ವಜನಿಕ ವಲಯದಲ್ಲಿ ಗುಸು ಗುಸು ಶುರುವಾಗಿದೆ. ಈ ಶರತ್ ಎಂಬ ವ್ಯಕ್ತಿ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿರುವಾಗ ಹಣದ ರುಚಿಯನ್ನು ಚೆನ್ನಾಗಿ ನೋಡಿರುವಂತೆ ಕಾಣುತ್ತಿದೆ. ಹಾಗಾಗಿ ಈ ಕಚೇರಿಯನ್ನು ಬಿಟ್ಟು ಹೋಗದೆ ಹಾಗೂ ಅಧಿಕಾರಿಗಳನ್ನು ಬೆನ್ನು ಬಿಡದೆ ಸಾರ್ವಜನಿಕರಿಂದ ಪಡೆಯುವ ಹಣದಿಂದ ಅಧಿಕಾರಿಗಳಿಗೆ ಕಮಿಷನ್ ಕೊಟ್ಟು ಇವನು ಕೂಡ ಹಣ ಮಾಡುವಲ್ಲಿ ಮುಂದಾಗಿದ್ದಾನೆ.

ಅರಕಲಗೂಡು ಕಾರ್ಯನಿರ್ವಾಹಕ ಅಧಿಕಾರಿಗಳಾದ ಗಿರಿಧರರವರೆ ನಿಮಗಿದು ತಿಳಿದಿಲ್ಲವೇ? ಅಥವಾ ತಿಳಿದಿದ್ದರು ಕೂಡ ಮೌನ ವಹಿಸಿದ್ದೀರಾ? ಇಂಥ ನೀಚ ವ್ಯಕ್ತಿಯನ್ನು ಕೆಲಸದಿಂದ ಬಿಡುಗಡೆಗೊಳಿಸಿದ ನಂತರ ಪ್ರತಿದಿನ ಕಚೇರಿಗೆ ಬಂದು ಕುರ್ಚಿಯನ್ನು ಬಿಸಿ ಮಾಡಿ ಹೋಗುವುದನ್ನು ತಪ್ಪಿಸಬೇಕಾಗಿದೆ. ಹಾಗೂ ಈ ಗ್ರಾಮ ಪಂಚಾಯತ್ ಸಿಸಿ ಕೆಮಾರ ವಿಡಿಯೋ ತರಿಸಿಕೊಂಡು ತನಿಖೆ ನಡೆಸಿ ಈ ವ್ಯಕ್ತಿ ಪ್ರತಿದಿನ ಕಚೇರಿಗೆ ಬಂದು ಕುಳಿತುಕೊಂಡು ಹೋಗುತ್ತಿದ್ದಾನೋ ಅಥವಾ ಸುಮ್ಮನೆ ಅವನ ಪಾಡಿಗೆ ಅವನು ಇದ್ದಾನೆಯೇ ಎಂದು ತನಿಖೆ ನಡೆಸಬೇಕಾಗಿದೆ ತನಿಖೆಯಲ್ಲಿ ಸಾಬೀತಾದರೆ ಇವನಿಗೆ ಸಹಕಾರ ನೀಡುತ್ತಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಿನ್ನಸ್ವಾಮಿ ಹಾಗೂ ಕಾರ್ಯದರ್ಶಿ ಡಿಸಿ ಗೌಡರನ್ನು ಕೆಲಸದಿಂದ ಅಮಾನತುಗೊಳಿಸಬೇಕಾಗಿದೆ ಹಾಗೂ ಶರತ್ ಎಂಬಾತನ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬೇಕಾಗಿದೆ.

MANY DROPS MAKE AN OCEAN
Support NewsKarnataka's quality independent journalism with a small contribution.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *