ಬೇಲೂರು: ಚನ್ನಕೇಶವ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸುವ ಭಕ್ತಾದಿಗಳಿಗೆ ಕುಡಿಯುವ ನೀರಿನ ಕೊರತೆ ನೀಗಿಸಲಾಗುತ್ತದೆ ಎಂದು ಪುರಸಭೆ ಅದ್ಯಕ್ಷೆ ತೀರ್ಥಕುಮಾರಿ ವೆಂಕಟೇಶ ತಿಳಿಸಿದರು.
ಪಟ್ಟಣದ ೧೨ನೇ ವಾರ್ಡಿನ ಜೆಪಿ ನಗರದ ಬಳಿ ಇರುವ ಕುಡಿಯುವ ನೀರಿನ ಸಂಪರ್ಕದ ಮೈನ್ ವಾಲ್ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿ ಹೋಗಿರುವುದನ್ನು ವೀಕ್ಷಣೆ ನಡೆಸಿ ನಂತರ ಮಾತನಾಡಿದ ಅವರು ಬೇಲೂರಿನ ವಿಶ್ವವಿಖ್ಯಾತ ಶ್ರೀ ಚನ್ನಕೇಶವ ದೇವಾಲಯದ ಜಾತ್ರಾ ಮಹೋತ್ಸವಕ್ಕೆ ಕೆಲವೇ ದಿನಗಳಿದ್ದು, ದೇಶ ವಿದೇಶಗಳಿಂದ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಆಗಮಿಸುವ ಲಕ್ಷಾಂತರ ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ.
ನಗರದ ೧೨ನೇ ವಾರ್ಡಿನ ಜೆಪಿ ನಗರದ ಬಳಿ ಇರುವ ಮೈನ್ ವಾಲ್ ಸಂಪೂರ್ಣವಾಗಿ ಮಣ್ಣಿನಿಂದ ಮುಚ್ಚಿ ಹಾಳಾಗಿದ್ದು, ಇದನ್ನ ನಮ್ಮ ಪೌರಕಾರ್ಮಿಕರ ಸಹಕಾರದಿಂದ ಇಂದು ಸ್ವಚ್ಛತೆಗೊಳಿಸಿ ಹಾಳಾಗಿರುವ ವಾಲ್ ನವೀಕರಿಸಲಾಗುತ್ತದೆ. ಅದೇ ರೀತಿ ಪಟ್ಟಣದ ೨೩ ವಾರ್ಡುಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ ಸೇರಿದಂತೆ ವಿವಿಧ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ನೌಕರರಾದ ಆದಿನಾರಾಯಣ, ಕುಮಾರ ಹಾಜರಿದ್ದರು.