ಹಾಸನ: ಮುಕ್ತ ಮತದಾನ ಸಮರ್ಥ ಸರ್ಕಾರ ನಿಟ್ಟಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ೨೦ ಜಿಲ್ಲೆಗಳಿಂದ ಎಲ್ಲಾ ವಯೋಮಾನ ಮತ್ತು ಶೈಕ್ಷಣಿಕ ಹಿನ್ನೆಲೆಯ ವಿವಿಧ ಜಾತಿ, ಧರ್ಮಗಳ ಸಾವಿರಕ್ಕೂ ಮಿಕ್ಕ ಮತದಾರರ ʻಕ್ಷಿಪ್ರ ಸಮೀಕ್ಷೆ’ ಒಂದನ್ನು ೨೦೨೨ರ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಕೈಗೊಳ್ಳಲಾಗಿದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಪ್ರಕಾಶ ಕಮ್ಮಾರಡಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಧಿಕಾರರೂಢ ಭಾಜಪದ ಮೇಲೆ ರಾಜ್ಯದ ಜನತೆಯಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಬೆಲೆ ಏರಿಕೆ, ನಿರುದ್ಯೋಗ, ಇವೇ ಮೊದಲಾದ ನೈಜ ಸಮಸ್ಯೆಗಳನ್ನು ಜೊತೆಗೆ, ಈ ಹಿಂದೆ ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ತಂದಿರುವ ಲಾಕ್ ಡೌನ್ ಸಮರ್ಪಕವಾಗಿ ನಿರ್ವಹಿಸಿಲ್ಲದಿರುವುದು, ಪ್ರಗತಿ ಪರ ಭೂಸುಧಾರಣೆ ಮತ್ತು ಕೃಷಿ ಉತ್ಪನ್ನ ಮಾರಾಟ ವ್ಯವಸ್ಥೆ (ಎಪಿಎಂಸಿ) ಕಾಯಿದೆಗಳಿಗೆ ತಂದಿರುವ ಅನಗತ್ಯ ತಿದ್ದುಪಡಿ ಮತ್ತು ಬಲತ್ಕಾರ ಭೂಸ್ವಾಧೀನದ ಇತ್ಯಾದಿಗಳ ಬಗ್ಗೆ ರೈತಾಪಿ ವರ್ಗದಲ್ಲಿ ಆತಂಕ ಮೂಡಿಸಿದೆ ಎಂದರು.
ಹಿರಿಯ ಪತ್ರಕರ್ತ ಆರ್.ಪಿ. ವೆಂಕಟೇಶ ಮೂರ್ತಿ, ಸಿಐಟಿಯು ಸಂಘಟನೆಯ ಕಾರ್ಯದರ್ಶಿ ಧರ್ಮೇಶ್, ಹೆಚ್.ಅರ್. ನವೀನ್ ಕುಮಾರ್, ರೈತ ಸಂಘದ ಮುಖಂಡ ಅರಸು ಉಪಸ್ಥಿತರಿದ್ದರು.